ಮಂಡಿ ನೋವಿಗೆ ನ್ಯಾಚುರಲ್ ಚಿಕಿತ್ಸೆ

ಸೋಮವಾರ, 8 ಆಗಸ್ಟ್ 2016 (11:39 IST)
ಮಂಡಿ ನೋವು ಎಂಬುವುದು ಈಗ ಸಾಮಾನ್ಯ ಎನ್ನಿಸಿಬಿಟ್ಟಿದೆ. ಮೊದಲು ವಯಸ್ಸಾದವರಿಗೆ ಬರುತ್ತಿದ್ದ ಕೀಲು ನೋವು ಇದೀಗ ಎಲ್ಲಾ ವಯಸ್ಸಿನದವರಿಗೂ ಬರುತ್ತಿದೆ. ಕೆಲವರಿಗೆ ಮಂಡಿ ನೋವು ಆಗಾಗೆ ಹೆಚ್ಚುತ್ತಲೇ ಇರುತ್ತದೆ. ಮಂಡಿ ನೋವು ಇದ್ದರೆ ನಿತ್ಯವು ಯಾತನೆ ಅನುಭವಿಸಬೇಕಾಗುತ್ತದೆ. ಐದು ನ್ಯಾಚುರಲ್ ಚಿಕಿತ್ಸೆಗಳಿಂದ ಮಂಡಿ ನೋವು ನಿವಾರಿಸಿಕೊಳ್ಳಬಹುದು.  
ಹೆಚ್ಚಿನ ಸಂಧರ್ಭದಲ್ಲಿ ಮಂಡಿ ನೋವು ಇರುವ ಜಾಗದಲ್ಲಿ ಸ್ವೆಲಿಂಗ್ ಆಗುವುದು, ಕೆಂಪಾಗುವುದು ಕಾಣಿಸಿಕೊಳ್ಳುತ್ತದೆ. ಈ ವೇಳೆಯಲ್ಲಿ ನೋವು ಹೆಚ್ಚಾಗಿರುತ್ತದೆ . ಮಂಡಿ ನೋವಿಗಾಗಿ ನ್ಯಾಚುರಲ್ ಟಿಪ್ಸ್ ಇಲ್ಲಿದೆ
 
ಮಸಾಜ್ ಥೆರಪಿ :
ಮಂಡಿ ನೋವಿಗೆ ಮಸಾಜ್ ಥೆರಪಿ ಪ್ರಮುಖ ಪರಿಣಾಮ ಬೀರಬಲ್ಲದ್ದು, ಮಂಡಿ ನೋವು ನಿವಾರಿಸುವಲ್ಲಿ ಮಸಾಜ್ ಮಾಡುವುದು ಕೂಡ ಮುಖ್ಯವಾಗುತ್ತದೆ. ಮಂಡಿಯಲ್ಲಿ ನೋವು ಕಾಣಿಸಿಕೊಂಡರೆ ಮನೆಯಲ್ಲಿ ಸೀಗುವ ಸಾಸಿವೆ ಎಣ್ಣೆ ಸ್ವಲ್ಪ ಬಿಸಿ ಮಾಡಿ ಮಸಾಜ್ ಮಾಡಬೇಕು. ಅಲ್ಲದೇ ನೀವೂ ಕೊಬ್ಬರಿ ಎಣ್ಣೆಯಿಂದಲೂ ಮಸಾಜ್ ಮಾಡಿಕೊಳ್ಳಬಹುದು. 
 
ಐಸ್ ಥೆರಪಿ :
ಮಂಡಿ ನೋವಿರುವ ಜಾಗಕ್ಕೆ 15 ರಿಂದ 20 ನಿಮಿಷಗಳ ಕಾಲ ಐಸ್‌ಗಳನ್ನು ಇಟ್ಟುಕೊಳ್ಳುವುದರಿಂದ ರಕ್ತದ ಹರಿವು ಸರಾಗವಾಗುತ್ತದೆ. ಅಲ್ಲದೇ ಅಂಗಾಂಶ ಊತ ನಿವಾರಣೆಯಾಗುತ್ತದೆ. ಐಸ್ ಥೆರಪಿ ಕೂಡ ಮಂಡಿ ನೋವಿನ ರಿಲೀಫ್ ಚಿಕಿತ್ಸೆಗಳಲ್ಲಿ ಒಂದು. 

ಹೀಟ್ ಥೆರಪಿ :
3 ನಿಮಿಷಗಳ ಕಾಲ ನೋವಿರುವ ಜಾಗಕ್ಕೆ ಹೀಟ್ ಥೆರಪಿ ಮಾಡಿಕೊಳ್ಳುವುದು ಉತ್ತಮ. ಹೀಟ್ ಥೆರಪಿ ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಮೂಳೆಗಳ ನೋವು ಉಪಶಮನವಾಗುತ್ತದೆ. ತಣ್ಣಗೆ ಹಾಗೂ ಬಿಸಿ ಇರುವ ಬಟ್ಟೆಯಿಂದ ಬಿಸಿ ಮಾಡುವ ಮುನ್ನ ಬಟ್ಟೆಯನ್ನು ಬೇರೆ ಬೇರೆಯಾಗಿ ಬಳಸಬೇಕು. ಹೀಟ್ ಥೆರಪಿಯನ್ನು ಡೈರೆಕ್ಟ್ ಆಗಿ ಸ್ಕಿನ್ ಮೇಲೆ ಹೀಟ್ ಮಾಡಲು ಹೋಗಬೇಡಿ.
 
ಮೆಡಿಕೇಷನ್ :
ಮಂಡಿ ನೋವಿಗೆ ಮೆಡಿಕೇಷನ್ ತೆಗೆದುಕೊಳ್ಳುವುದರ ಮೂಲಕ ನೋವು ಕಡಿಮೆ ಮಾಡಿಕೊಳ್ಳಬಹುದು. ಐಬುಪ್ರೊಫೇನ್ ಮೆಡಿಸಿನ್ ಮಂಡಿ ನೋವಿಗೆ ಉತ್ತಮವಾದದ್ದು,

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ