ಬೆಂಗಳೂರು : ಸಾಮಾನ್ಯವಾಗಿ ಕೆಲವರ ದೇಹ ತೆಳ್ಳಗಿದ್ದರೂ ಅವರ ಕೈಗಳು ಮಾತ್ರ ದಪ್ಪವಾಗಿರುತ್ತದೆ. ಇದನ್ನು ನೋಡಲು ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ಈ ಕೈ ತೋಳನ್ನು ಸ್ಲಿಮ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
ಕೈಗಳ ತೋಳನ್ನು ಹೆಚ್ಚಾಗಿ ಚಲನೆ ಮಾಡದಿದ್ದಾಗ ಅಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ಕೈಗಳು ದಪ್ಪವಾಗುತ್ತದೆ. ಪ್ರತಿದಿನ ಕೈಗಳನ್ನು ಮೇಲೆ ಕೆಳಗೆ ಎಡಬಲ ತಿರುಗಿಸುತ್ತ ವ್ಯಾಯಾಮ ಮಾಡಿ.
ಹಾಗೇ ತ್ರಿಫಲ(ನೆಲ್ಲಿಕಾಯಿ, ಅಳವೆಕಾಯಿ, ತಾರೆ ಕಾಯಿ)ಚೂರ್ಣವನ್ನು ನಿಮ್ಮ ತೋಳುಗಳಿಗೆ ಹಚ್ಚಿ ಕೆಳಗಿನಿಂದ ಮೇಲಕ್ಕೆ ಮಸಾಜ್ ಮಾಡಿ. ಇದರಿಂದ ಚರ್ಮ ಮತ್ತು ಮಾಂಸಖಂಡಗಳ ಮಧ್ಯೆ ಇರುವ ಕೊಬ್ಬು ಕರಗಿ ಹೊರಗೆ ಬರುತ್ತದೆ.