ಬೆಂಗಳೂರು : ಹತ್ತಿ ಬಟ್ಟೆಗಳನ್ನು ಮೊದಲ ಬಾರಿಗೆ ತೊಳೆಯುವಾಗ ಸ್ವಲ್ಪ ಸಿಂಕ್ ಆಗುತ್ತದೆ. ಇದರಿಂದ ಬಿಗಿಯಾಗುತ್ತದೆ. ಈ ರೀತಿ ಆಗಬಾರದಂತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
ಹತ್ತಿ ಬಟ್ಟೆಗಳನ್ನು ಡಿಟರ್ಜೆಂಟ್ ನಿಂದ ತೊಳೆಯುವ ಬದಲು ಬೇಬಿ ಶಾಂಪು ಬಳಸಿ ವಾಶ್ ಮಾಡಿ. ಇದರಿಂದ ಬಟ್ಟೆ ಸಿಂಕ್ ಆಗುವುದಿಲ್ಲ. ಬಟ್ಟೆಯ ಹೊಳಪು ಹಾಗೆ ಇರುತ್ತದೆ. ಹಾಗೇ ಕಾಟನ್ ಬಟ್ಟೆಗಳನ್ನು ಹೊಲಿಯುವ ಮುನ್ನ ಮೊದಲು ಅದನ್ನು ವಾಶ್ ಮಾಡಿ ಬಳಿಕ ಟೈಲರ್ ಗೆ ಹೊಲಿಯಲು ನೀಡಿ.