ಈ ಮಾತ್ರೆಯಿಂದ ಮಹಿಳೆಯರಲ್ಲಿ ಸೆಕ್ಸ್ ಜಾಗೃತಗೊಳ್ಳುತ್ತದೆ

ಶನಿವಾರ, 9 ಡಿಸೆಂಬರ್ 2017 (16:23 IST)
ಮಾನಸಿಕವಾಗಿ ಖಿನ್ನತೆಗೊಳಗಾದವರಿಗೆ ವೈದ್ಯರು ಮಾತ್ರೆ ನೀಡುತ್ತಾರೆ. ಆ ಮಾತ್ರೆಯಿಂದ ಖಿನ್ನತೆ ಕಡಿಮೆಯಾಗುತ್ತದೋ ಅಥವಾ ಆಗುವುದಿಲ್ಲವೋ. ಆದರೆ ಮಾತ್ರೆಯಿಂದ ಮಹಿಳೆಯರಲ್ಲಿ ಕಾಮುಕ ಭಾವನೆ ಹೆಚ್ಚಿಸುತ್ತದೆ ಎಂದು ಅಧ್ಯಯನದ ಮೂಲಕ ಗೊತ್ತಾಗಿದೆ.
ಅಧ್ಯಯನವೊಂದರ ಪ್ರಕಾರ ಈ ಖಿನ್ನತೆಯ ಮಾತ್ರೆ ವಯಾಗ್ರಾ ಮಾತ್ರೆ ತರಹ ಕೆಲಸ ನಿರ್ವಹಿಸುತ್ತದೆ ಎಂದು ತಿಳಿದು ಬಂದಿದೆ. ಕಡಿಮೆ ಕಾಮಾಸಕ್ತಿ ಇರುವ ಮಹಿಳೆಯರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.
 
ಫಿಲಿಬೆರಸರಿನ್‌ ಹೆಸರಿನ ಈ ಮಾತ್ರೆ ಖಿನ್ನತೆಗೆ ಒಳಗಾದ ಮಹಿಳೆಯರಿಗೆ ನೀಡಲಾಗುತ್ತದೆ.ಆದರೆ, ಇದರಿಂದ ಸೆಕ್ಸ್‌ ಭಾವನೆ ಕೂಡ ಹೆಚ್ಚುವ ಸಾಧ್ಯತೆ ಇರುತ್ತದೆ ಎಂದು ನಾರ್ಥ್ ಕೆರೊಲಿನಾ ವಿಶ್ವವಿದ್ಯಾಲಯದ ಸ್ತ್ರೀ ರೋಗ ವಿಭಾಗದ ಪ್ರೋಫೆಸರ್‌ ಜಾನ್‌ ಎಮ್‌ ಥಾರ್ಪರ್ ಹೇಳಿದ್ದಾರೆ. 
 
ಫಿಲಿಬೆರಸರಿನ್‌ ಒಂದು ಡಿಪ್ರೇಶನ್‌ ಮಾತ್ರೆ ಇರಬಹುದು, ಇದು ಖಿನ್ನತೆ ರೋಗಕ್ಕಿಂತ ಹೆಚ್ಚಿಗೆ ಮಹಿಳೆಯರಲ್ಲಿ ಕಾಮುಕ ಭಾವನೆ ಕೆರಳಿಸುವದಂತು ಗ್ಯಾರೆಂಟಿ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚಿನ ಖಿನ್ನತೆಗೆ ಒಳಗಾಗುತ್ತಿದ್ದಾರೆ , ಜೊತೆಗೆ ಕಾಮದಲ್ಲಿ ಕಡಿಮೆ ಆಸಕ್ತಿ ಇರುವ ಮಹಿಳೆಯರು ಕೂಡಾ ಇದ್ದಾರೆ. ಆದರೆ ಈ ಖಿನ್ನತೆಯ ಮಾತ್ರೆ ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸುವ ಚಮತ್ಕಾರ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ