ವಿಪರೀತ ಕೋಪ ಬರುತ್ತಾ? ಈ ಮುದ್ರೆಯನ್ನು ಮಾಡಿದರೆ ಓಡಿಹೋಗುತ್ತೆ!
ಸೋಮವಾರ, 16 ಆಗಸ್ಟ್ 2021 (17:28 IST)
ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡರೆ ಕೋಪವನ್ನು ದೂರ ಮಾಡಬಹುದು. ಒಂದು ವೇಳೆ ಕೋಪ ನಿಯಂತ್ರಣ ಬಾರದೆ ಇದ್ದರೆ ಯೋಗದ ಮೊರೆಯೂ ಹೋಗಬಹುದು. ಒಟ್ಟಿನಲ್ಲಿ ಕೋಪ ಕಡಿಮೆಮಾಡಲು ಸಾಧ್ಯವಿದೆ. ಆದರೆ ಕೆಲವೊಮ್ಮೆ ಯಾಕೆ ಕೋಪ ಮಾಡುತ್ತಿದ್ದೀರಿ? ಎಂದು ಯೋಚಿಸಿ, ಮತ್ತು ಇದರಿಂದ ಪ್ರಯೋಜನ ಇದೆಯಾ? ಎಂಬುದನ್ನು ತಿಳಿದುಕೊಳ್ಳಿ.
ಕೋಪ ಬರುವುದು ಸಾಮಾನ್ಯ. ಕೆಲವರಿಗಂತೂ ವಿಪರೀತ ಕೋಪ ಬರುತ್ತದೆ. ಸಣ್ಣ- ಸಣ್ಣ ವಿಚಾರಕ್ಕೂ ಜಗಳ ಮಾಡುತ್ತಿರುತ್ತಾರೆ. ಹೆಚ್ಚಾಗಿ ಗಂಡ-ಹೆಂಡತಿ ಕಾರಣವಿಲ್ಲದಿದ್ದರು ಜಗಳ ಮಾಡುತ್ತಿರುತ್ತಾರೆ. ಆದರೆ ಇದರಿಂದ ಖಿನ್ನತೆ ಸೇರಿದಂತೆ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಕಾಡುತ್ತದೆ.
ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡರೆ ಕೋಪವನ್ನು ದೂರ ಮಾಡಬಹುದು. ಒಂದು ವೇಳೆ ಕೋಪ ನಿಯಂತ್ರಣ ಬಾರದೆ ಇದ್ದರೆ ಯೋಗದ ಮೊರೆಯೂ ಹೋಗಬಹುದು. ಒಟ್ಟಿನಲ್ಲಿ ಕೋಪ ಕಡಿಮೆಮಾಡಲು ಸಾಧ್ಯವಿದೆ. ಆದರೆ ಕೆಲವೊಮ್ಮೆ ಯಾಕೆ ಕೋಪ ಮಾಡುತ್ತಿದ್ದೀರಿ? ಎಂದು ಯೋಚಿಸಿ, ಮತ್ತು ಇದರಿಂದ ಪ್ರಯೋಜನ ಇದೆಯಾ? ಎಂಬುದನ್ನು ತಿಳಿದುಕೊಳ್ಳಿ.
ನಿಜವಾಗಿ ಕೋಪ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಆದರೆ ಕೋಪ ಬಂದ ಕಾರಣವನ್ನು ಹೇಳಿ ಸರಿಯಾಗಿ ಇತ್ಯರ್ಥ ಮಾಡಿಕೊಂಡರೆ ಅಲ್ಲಿಗೆ ಸರಿಯಾಗುತ್ತದೆ. ಇಷ್ಟಾದರು ಕೋಪ ಕಂಟ್ರೋಲ್ಗೆ ಬರೋದಿಲ್ಲ ಎಂದು ಗೊತ್ತಾದರೆ ಶಕ್ತಿ ಮುದ್ರೆ ಟ್ರೈ ಮಾಡಿ. ಖಂಡಿತಾ ಕೋಪ ಕಡಿಮೆಯಾಗುತ್ತದೆ. ಶಕ್ತಿ ಮುದ್ರೆ
ಶಕ್ತಿ ಮುದ್ರೆ ಮಾಡಿದರೆ ಕೋಪ ಕಡಿಮೆಯಾಗುತ್ತದೆ. ಇದನ್ನು ವಜ್ರಾಸನ ಭಂಗಿಯಲ್ಲಿ ಕುಳಿತು ಮಾಡಬೇಕು. ಇದರಿಂದ ರಕ್ತ ಸಂಚಲನದ ಮೇಲೆ ಪ್ರಭಾವ ಬೀರಿ ಮನಸ್ಸು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ. ನರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಕೆಟ್ಟ ಆಲೋಚನೆ ದೂರವಾಗುತ್ತದೆ. ಒತ್ತಡ, ನಿದ್ರಾಹೀನತೆ ದೂರ ಸರಿಯುತ್ತದೆ. ಒಟ್ಟಿನಲ್ಲಿ ಶಕ್ತಿ ಮುದ್ರೆಗೆ ಕೋಪವನ್ನು ಓಡಿಸುವ ಶಕ್ತಿಯಿದೆ.