ಮಕ್ಕಳಲ್ಲಿ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ನೀಡಿ

ಬುಧವಾರ, 24 ಮಾರ್ಚ್ 2021 (06:24 IST)
ಬೆಂಗಳೂರು : ಪರೀಕ್ಷೆ ಎಂದರೆ ಮಕ್ಕಳಿಗೆ ಯಾವಾಗಲೂ ಚಿಂತೆಯಾಗುತ್ತಿರುದೆ. ಪರೀಕ್ಷೆ ಯಾವ ಪ್ರಶ್ನೆ ಬರುತ್ತದೆ? ಹೇಗೆ ಉತ್ತರಿಸುವುದು? ಹೀಗೆ ಹಲವಾರು ಚಿಂತೆ ಕಾಡುತ್ತದೆ. ಈಗಂತೂ ಕೊರೊನಾ. ಮನೆಯಲ್ಲಿಯೇ ಮಕ್ಕಳಿಗೆ ಆನ್ ಲೈನ್ ಎಕ್ಸಾಂ ಗಳನ್ನು ಮಾಡುತ್ತಾರೆ. ಮಕ್ಕಳು ಒತ್ತಡಕ್ಕೆ ಸಿಲುಕುತ್ತಾರೆ. ಮಕ್ಕಳ ಒತ್ತಡವನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ.

ಅಶ್ವಗಂಧ ಒಂದು ಆಯುರ್ವೇದಿಕ್ ಗಿಡಮೂಲಿಕೆಯಾಗಿದ್ದು,  ಅದು ಉತ್ಕರ್ಷಣ ನಿರೋಧಕವಾಗಿದೆ. ಇದು ನೈಸರ್ಗಿಕವಾಗಿ ಆತಂಕವನ್ನು ಕಡಿಮೆ ಮಾಡುತ್ತದೆ. ಅಶ್ವಗಂಧವು ಅಮೈನೋ ಆಮ್ಲಗಳು ಮತ್ತು ಜೀವಸತ್ವಗಳ ಮಿಶ್ರಣವಾಗಿದೆ. ಅದು ದೇಹವನ್ನು ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಅಲ್ಲದೇ ಇದು ನಿಮ್ಮ ನೆನಪಿನ ಶಕ್ತಿ ಮತ್ತು ತಾಳ್ಮೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಇದು ನಿಮ್ಮ ದೇಹದ ಶಕ್ತಿಯನ್ನು ಸಮತೋಲಗೊಳಿಸುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲಿಗೆ ಅಶ್ವಗಂಧ ಮಿಕ್ಸ್ ಮಾಡಿ ಕುಡಿಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ