ಬೆಂಗಳೂರು : ಸುತ್ತಾಡುವುದೆಂದರೆ ಕೆಲವರಿಗೆ ಬಹಳ ಇಷ್ಟ. ಆದರೆ ಇದರಿಂದ ಚರ್ಮಕ್ಕೆ ಸಾಕಷ್ಟು ಸಮಸ್ಯೆಗಳಾಗುತ್ತದೆ. ಹಾಗಾಗಿ ಹೊರಗಡೆ ಹೋಗಿ ಬಂದ ತಕ್ಷಣ ನಿಮ್ಮ ಮುಖದ ಚರ್ಮವನ್ನು ಕಾಪಾಡಲು ಈ ಫೇಸ್ ಪ್ಯಾಕ್ ಹಚ್ಚಿ.
1 ಚಮಚ ಜೇನುತುಪ್ಪ, 2 ಚಮಚ ನಿಂಬೆ ರಸ, 1 ಚಿಟಿಕೆ ಅರಶಿನ ಈ ಮೂರು ಪದಾರ್ಥಗಳನ್ನು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ.ಇದರಿಂದ ಟ್ಯಾನಿಂಗ್ ಸ್ವಚ್ಛವಾಗುತ್ತದೆ. ಸತ್ತ ಚರ್ಮವನ್ನು ನಿವಾರಿಸುತ್ತದೆ.