ನುಗ್ಗೇಕಾಯಿಯ ಆರೋಗ್ಯ ಪ್ರಯೋಜನಗಳು

ಬುಧವಾರ, 19 ಸೆಪ್ಟಂಬರ್ 2018 (13:57 IST)
ನುಗ್ಗೇಕಾಯಿಯ ರುಚಿಯನ್ನು ಸವಿಯದೇ ಇರುವವರ ಸಂಖ್ಯೆ ತುಂಬಾ ವಿರಳ. ಸಭೆ ಸಮಾರಂಭಗಳಲ್ಲಿ ನುಗ್ಗೇಕಾಯಿಯನ್ನು ಬಳಸಿದ ಪದಾರ್ಥವನ್ನೇ ಮಾಡುವುದು ಜಾಸ್ತಿ. ಭಾರತದಲ್ಲಿಯೂ ನುಗ್ಗೇಕಾಯಿಯ ಉತ್ಪಾದನೆ ಬಹಳ ಚೆನ್ನಾಗಿದೆ. ವಾಸ್ತವದಲ್ಲಿ ನುಗ್ಗೇಕಾಯಿಯು ಪೌಷ್ಠಿಕ ಆಹಾರವಾಗಿದ್ದು, ಅದರ ಸೇವನೆಯು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಿ ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳುವುದಕ್ಕಿಂತ ನುಗ್ಗೇಕಾಯಿಯನ್ನು ಸೇವಿಸಿದರೆ ನೈಸರ್ಗಿಕವಾಗಿ ದೇಹದಲ್ಲಿ ಕ್ಯಾಲ್ಸಿಯಂ ಅಂಶವು ಹೆಚ್ಚಳವಾಗುತ್ತದೆ. 
* ನುಗ್ಗೆಕಾಯಿಯಲ್ಲಿ ವಿಟಾಮಿನ್ ಸಿ ಉತ್ತಮ ಪ್ರಮಾಣದಲ್ಲಿರುವುದರಿಂದ ಸಾಮಾನ್ಯವಾಗಿ ಬರುವ ಫ್ಲೂ, ಜ್ವರ, ಗಂಟಲು ಬೇನೆ ಕೆರೆತ, ಶೀತ ಮೊದಲಾದ ವೈರಸ್ ಆಧಾರಿತ ಕಾಯಿಲೆಗಳನ್ನು ಹತ್ತಿಕ್ಕಲು ನೆರವಾಗುತ್ತದೆ.
 
* ನುಗ್ಗೆಯ ಎಲೆಗಳನ್ನು ಅರೆದು ಕೊಂಚ ಜೇನಿನಲ್ಲಿ ಮಿಶ್ರಣ ಮಾಡಿ ಇದನ್ನು ಎಳನೀರಿನಲ್ಲಿ ಸೇವಿಸಿದರೆ ಹೊಟ್ಟೆಯಲ್ಲಿ ಉರಿ ಕಡಿಮೆಯಾಗುತ್ತದೆ.
 
* ನುಗ್ಗೆಕಾಯಿಯನ್ನು ಸೇವಿಸುವುದರಿಂದ ಅತಿಸಾರ, ಕಾಲರಾ, ಜಾಂಡೀಸ್ ಮೊದಲಾದ ಕಾಯಿಲೆಗಳು ಶೀಘ್ರವಾಗಿ ಗುಣವಾಗುತ್ತದೆ.
 
* ನುಗ್ಗೇಕಾಯಿಯಲ್ಲಿ ಹಲವಾರು ಖನಿಜಗಳು ಇದ್ದು ಇದು ನಮ್ಮ ದೇಹದ ಮೂಳೆಗಳನ್ನು ದೃಢಗೊಳಿಸುತ್ತದೆ ಮತ್ತು ರಕ್ತಹೀನತೆಯನ್ನು ಹೋಗಲಾಡಿಸುತ್ತದೆ.
 
* ನುಗ್ಗೇಕಾಯಿಯ ತೊಗಟೆ ಮತ್ತು ಕಾಂಡದ ಭಾಗಗಳನ್ನು ಕತ್ತರಿಸಿಕೊಂಡು ಚೆನ್ನಾಗಿ ತೊಳೆದು ಆನಂತರ 1 ಲೋಟ ನೀರಿನಲ್ಲಿ ಬಿಸಿ ಮಾಡಿ ಸೋಸಿಕೊಂಡು ಈ ನೀರನ್ನು ಸುಮಾರು 10 ಮಿಲಿಯಷ್ಟು ದಿನಕ್ಕೆ ಎರಡು ಬಾರಿಯಂತೆ ಹದಿನೈದು ದಿನಗಳ ಕಾಲ ಸೇವಿಸುತ್ತಾ ಬಂದರೆ ಹರ್ನಿಯಾ ಸಮಸ್ಯೆಯು ನಿವಾರಣೆಯಾಗುತ್ತದೆ
 
* ನುಗ್ಗೆಕಾಯಿಯನ್ನು ಕುದಿಸಿ ಅದರ ತಿರುಳನ್ನು ಒಣಗಿಸಬಹುದು. ಇವು ಪಚನಕ್ಕೆ ಬಹಳ ಒಳ್ಳೆಯದಾಗಿವೆ. 
* ನುಗ್ಗೇಕಾಯಿಯ ಸೇವನೆಯಿಂದ ಮೂಳೆಗಳ ದೃಢತೆ ಹೆಚ್ಚುತ್ತಾ ಹೋಗುತ್ತದೆ.
 
* ನುಗ್ಗೇಕಾಯಿಯ ಸೇವನೆಯಿಂದ ಉರಿಯೂತ ನಿವಾರಕ ಗುಣಗಳು ವಿಶೇಷವಾಗಿ ಶ್ವಾಸ ಸಂಬಂಧಿ ಸೋಂಕುಗಳಿಂದ ರಕ್ಷಿಸಲು ನೆರವಾಗುತ್ತವೆ.
 
* ನುಗ್ಗೇಕಾಯಿಯು ಶ್ವಾಸ ಸಂಬಂಧಿ ತೊಂದರೆಗಳಾದ ಅಸ್ತಮಾ ಮತ್ತು ಕ್ಷಯದಂತಹ ರೋಗಗಳ ವಿರುದ್ಧ ಹೋರಾಡುವ ಒಂದು ನೈಸರ್ಗಿಕ ವಿಧಾನವೂ ಆಗಿದೆ.
 
* ಹೆರಿಗೆ ನೋವನ್ನು ಕಡಿಮೆ ಮಾಡಿ ಮಗು ಜನಿಸಲು ನುಗ್ಗೇಕಾಯಿ ಸಹಕಾರಿಯಾಗಿದೆ. ಇವು ಹೆಚ್ಚು ಪ್ರಮಾಣದ ರಕ್ತಸ್ರಾವವನ್ನು ಕುಗ್ಗಿಸಿ ಹೆರಿಗೆಯ ಸಮಯದಲ್ಲಿ ಉಂಟಾಗುವ ಸಂಕಷ್ಟಗಳನ್ನು ನಿವಾರಿಸುತ್ತದೆ.
 
* ನುಗ್ಗೇಕಾಯಿಯು ಪುರುಷರಲ್ಲಿ ಆರೋಗ್ಯಕರ ವೀರ್ಯಾಣುಗಳನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ.
 
* ನುಗ್ಗೇಕಾಯಿಯು ಬ್ಯಾಕ್ಟೀರಿಯಾ ನಿರೋಧಕ ಅಂಶಗಳನ್ನು ಹೊಂದಿರುವುದರಿಂದ ಗರ್ಭಾವಸ್ಥೆಯಲ್ಲಿ ಕಂಡುಬರುವ ಗಂಟಲು, ಚರ್ಮ ಮತ್ತು ಎದೆಯ ಸೋಂಕುಗಳನ್ನು ನಿವಾರಿಸುತ್ತದೆ.
 
* ನುಗ್ಗೇಕಾಯಿಯಲ್ಲಿ ವಿಟಾಮಿನ್ ಎ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದು ನಮ್ಮ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ.
 
* ನುಗ್ಗೇಕಾಯಿಯ ಸೇವನೆಯಿಂದ ಮಧುಮೇಹವು ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹಿಗಳು ಸುರಕ್ಷಿತವಾಗಿ ಸೇವಿಸಬಹುದಾದ ಆಹಾರವಾಗಿದ್ದು, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಲು ಇವು ಉತ್ತಮವಾಗಿವೆ.
 
* ಗರ್ಭಧಾರಣೆಯ ಮಧುಮೇಹವಾದ ಮೆಲ್ಲಿಟಸ್ ಅನ್ನು ನಿಯಂತ್ರಣದಲ್ಲಿಡಲೂ ಸಹ ನುಗ್ಗೆಕಾಯಿಯು ಸಹಕಾರಿಯಾಗಿದೆ.
 
* ನುಗ್ಗೇಕಾಯಿ ರಸ ಹಾಗೂ ನಿಂಬೆರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಹಚ್ಚುವುದರಿಂದ ಬ್ಲಾಕ್ ಹೆಡ್, ಮೊಡವೆ, ತುರಿಕೆಗಳು ಕಡಿಮೆಯಾಗುತ್ತದೆ.
 
* ನುಗ್ಗೇಕಾಯಿ ಹಾಗೂ ಅದರ ಎಲೆಗಳ ಸೇವನೆಯಿಂದ ದೇಹದಲ್ಲಿ  ಇರುವ ರಕ್ತ ಶುದ್ಧಿಯಾಗುತ್ತದೆ ಮತ್ತು ಮೊಡವೆಗಳೂ ಸಹ ಕಡಿಮೆಯಾಗುತ್ತದೆ.
 
* ಗರ್ಭಿಣಿಯರಿಗೆ ಬೆಳಗ್ಗಿನ ಸಮಯದಲ್ಲಿ ಉಂಟಾಗುವ ದೈಹಿಕ ಖಾಯಿಲೆಗಳನ್ನು ದೂರ ಮಾಡಲು ನುಗ್ಗೇಕಾಯಿ ಸಹಕಾರಿ. ವಾಕರಿಕೆ, ತಲೆನೋವು, ಹೊಟ್ಟೆ ತೊಳೆಸುವಿಕೆ ಅಂತೆಯೇ ಬೆಳಗ್ಗಿನ ಕಿರಿಕಿರಿಗಳನ್ನು ನಿವಾರಿಸುತ್ತದೆ.
 
* ನುಗ್ಗೇಕಾಯಿಯ ಸೇವನೆಯಿಂದ ಕಮ್ಣಿನ ದೃಷ್ಟಿ, ಉರಿ ಹಾಗೂ ಇನ್ನಿತರ ರೀತಿಯ ಕಣ್ಣಿನ ತೊಂದರೆಗಳು ದೂರವಾಗುತ್ತವೆ.
 
* ಬಾಣಂತಿಯರು ನುಗ್ಗೇಕಾಯಿಯ ಸೇವನೆ ಮಾಡುವುದರಿಂದ ಎದೆ ಹಾಲಿನ ಉತ್ಪತ್ತಿಯು ಹೆಚ್ಚುತ್ತದೆ.
 
* ನುಗ್ಗೇಕಾಯಿಯಲ್ಲಿ ವಿಟಾಮಿನ್ ಬಿ, ವಿಟಾಮಿನ್ ಬಿ6, ನಿಯಾಸಿನ್, ರೈಬೊಫ್ಲೆವಿನ್, ಫೋಲಿಕ್ ಆಮ್ಲ ಹೆಚ್ಚಿದ್ದು ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
 
* ಕಣಿಣನ ದೃಷ್ಟಿ ಕುಂದಲು ಕಮ್ಣಿನ ಅಕ್ಷಿಪಟಲದ ಸೋಂಕೂ ಸಹ ಒಂದು ಕಾರಣ. ನುಗ್ಗೆಕಾಯಿಯನ್ನು ಸೇವಿಸಿದರೆ ಈ ಸೋಂಕು ತಗುಲುವ ಸಂಭವ ಕಡಿಮೆಯಾಗಿ ಅಕ್ಷಿಪಟಲದ ಕ್ಷಮತೆಯನ್ನು ಉಳಿಸಿಕೊಳ್ಳುತ್ತದೆ.
 
* ನುಗ್ಗೆಕಾಯಿಯ ರಸವನ್ನು ಮುಖಕ್ಕೆ ತೆಳ್ಳಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಚರ್ಮದ ಕಾಂತಿಯು ಹೆಚ್ಚುತ್ತದೆ.
 
* ನುಗ್ಗೇಕಾಯಿಯ ಸೇವನೆಯಿಂದ ಶ್ವಾಸ ಸಂಬಂಧಿ ತೊಂದರೆಗಳಲ್ಲದೇ ಅಸ್ತಮಾ, ಕ್ಷಯದಂತಹ ರೋಗಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.
 
ಒಟ್ಟಾರೆ ನುಗ್ಗೆಕಾಯಿಯು ಆಕಾರದಲ್ಲಿ ತೆಳ್ಳಗೆ ಇದ್ದರೂ ಇದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಎಲ್ಲಾ ಖಾಯಿಲೆಗಳಿಗೆ ವೈದ್ಯರ ಸಲಹೆಗಳಿಲ್ಲದೇ ಚಿಕಿತ್ಸೆಗಳನ್ನು ಪಡೆಯುವುದು ಸಮಂಜಸವಲ್ಲ. ಆದ್ದರಿಂದ ವೈದ್ಯರ ಸಲಹೆಯನ್ನು ತೆಗೆದುಕೊಂಡು ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ