ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು ಗೊತ್ತಾ?
ಆದರೆ ಉಪ್ಪು ಮತ್ತು ಸಕ್ಕರೆ ಎರಡನ್ನೂ ಬಿಟ್ಟು ಬದುಕುವುದು ಕಷ್ಟ. ಹಾಗಾದರೆ ಒಂದು ದಿನದಲ್ಲಿ ಎಷ್ಟು ಸಕ್ಕರೆ ಸೇವಿಸಬಹುದು? ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಒಂದು ದಿನಕ್ಕೆ ಒಬ್ಬ ಆರೋಗ್ಯವಂತ ವ್ಯಕ್ತಿ 6 ಟೇಬಲ್ ಚಮಚಕ್ಕಿಂತ ಹೆಚ್ಚು ಸಕ್ಕರೆ ಸೇವಿಸಬಾರದು.
ಸಕ್ಕರೆ ಸೇವನೆ ಪ್ರಮಾಣ ನಾವು ಪ್ರತಿನಿತ್ಯ ತೆಗೆದುಕೊಳ್ಳುವ ಕ್ಯಾಲೊರಿ ಪ್ರಮಾಣದ ಶೇ.10 ಕ್ಕಿಂತ ಹೆಚ್ಚು ಇರಬಾರದು ಎಂದು ಆರೋಗ್ಯ ಸಂಸ್ಥೆ ಹೇಳುತ್ತದೆ. ಅದರಲ್ಲೂ ಸಂಸ್ಕರಿತ ಸಕ್ಕರೆ ಅಧಿಕ ಪ್ರಮಾಣದಲ್ಲಿ ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ.