ಆರೋಗ್ಯದ ಗುಟ್ಟು! ನಿಮಗಿದು ಗೊತ್ತೇ? ತಪ್ಪದೇ ಓದಿ

ಬುಧವಾರ, 30 ಜೂನ್ 2021 (16:02 IST)
ಹಣ್ಣುಗಳು ನಿದ್ರೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯದಲ್ಲಿದ್ದರೆ, ಮತ್ತೊಮ್ಮೆ ಯೋಚಿಸಿ! ಮಲುಗುವ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದು ಬೇಡ ಎಂದು ಹಲವಾರು ತಜ್ಞರು ಸಲಹೆ ನೀಡುತ್ತಾರೆ.

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಸೇವನೆಗೆ ಸರಿಯಾದ ಸಮಯ ಯಾವುದು ಎಂಬುದು ತುಂಬಾ ಜನರಿಗೆ ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಮಲಗುವ ಮುನ್ನ ಹಣ್ಣುಗಳನ್ನು ಸೇವಿಸಿದ್ದರೆ ಅದು ನಮ್ಮ ಜೀರ್ಣಕ್ರಿಯೆ ಮತ್ತು ಉತ್ತಮ ನಿದ್ರೆಗೆ ಅಡ್ಡಿ ಮಾಡಬಹುದು. ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕೂಡ ಹೆಚ್ಚಿಸಬಹುದು. ಮಲುಗುವ ಮುನ್ನ ಹಣ್ಣುಗಳನ್ನು ಸೇವಿಸಬೇಕೇ ಇಲ್ಲವೇ ಎನ್ನುವುದು ಒಂದು ಮುಖ್ಯ ವಿಷಯವಾಗಿದೆ. ಏಕೆಂದರೆ ಆರೋಗ್ಯ ಮತ್ತು ಪೌಷ್ಟಿಕಾಂಶದ ಸಮಾತೋಲವನ್ನು ಕಾಪಾಡುವಲ್ಲಿ ಹಣ್ಣುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕೆಲವರು ಕೆಲವು ಹಣ್ಣುಗಳು ನಿದ್ದೆ ಮಾಡಲು ಸಾಹಾಯ ಮಾಡುತ್ತದೆ ಎಂದು ಹೇಳುತ್ತಾರೆ ಇನ್ನು ಕೆಲವರು ಇಲ್ಲ ಎಂದು ಹೇಳುತ್ತಾರೆ ಇದು ಗೊಂದಲವನ್ನು ಉಂಟುಮಾಡುತ್ತದೆ.

ಉದಾಹರಣೆಗೆ ಬೈದಾನನಾಥ್ ಕ್ಲಿನಿಕಲ್ ಆಪರೇಶನ್ಸ್ ಮತ್ತು ಕೋರ್ಡಿನೇಷನ್ ಮ್ಯಾನೇಜರ್ ಅಶುತೋಷ್ ಗೌತಮ್ ಹೇಳುತ್ತಾರೆ ಆಯುರ್ವೇದದ ಪ್ರಕಾರ ನಿಮ್ಮ ನಿದ್ರೆಗೆ ಮೂರು ಗಂಟೆಗಳ ಮೊದಲು ಆಹಾರವನ್ನು ಸೇವಿಸಬೇಕು ಎನ್ನುತ್ತಾರೆ.
ಸರಿಯಾದ ಊಟ ಮತ್ತು ಹಣ್ಣುಗಳ ಸೇವನೆ ನಡುವೆ ಅಂತರವಿರಬೇಕು ಏಕೆಂದರೆ ಎರಡೂ ಜೀರ್ಣಾಂಗ ವ್ಯವಸ್ಥೆಯ ಮೇಲೆ ವಿಭಿನ್ನ ಪರಿಣಾಮ ಬೀರುತ್ತವೆ.ಏಕೆಂದರೆ ಹಣ್ಣುಗಳು ಬೇಗನೆ ಜೀರ್ಣವಾಗುತ್ತವೆ ಅದರಿಂದ ನೀವು ಊಟ ಮಾಡುವ ಮೊದಲು ವಿಶೇಷವಾಗಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ಊಟವನ್ನು ಸೇವಿಸುವ ಮೊದಲು ಹಣ್ಣುಗಳನ್ನು ಸೇವಿಸಿದ್ದರೆ ಹಣ್ಣುಗಳಿಂದ ಸಿಗುವ ಗ್ಯಾಸ್ಟ್ರಿಕ್ ಜ್ಯೂಸ್ ನಿಮ್ಮ ಜೀರ್ಣಕ್ರಿಯೇಗೆ ಸಹಾಯ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ