ಜೇನುತುಪ್ಪ ಶುಂಠಿಯ ಮಹತ್ವ

ಶುಕ್ರವಾರ, 21 ನವೆಂಬರ್ 2014 (14:25 IST)
ಮಕ್ಕಳಿಗೆ ಹಸಿಶುಂಠಿಯ ರಸವನ್ನು ಜೇನು ತುಪ್ಪದಲ್ಲಿ ಬೆರಸಿ ಕೊಡುವುದರಿಂದ ಕರುಳು ಮತ್ತು ಜಠರಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುವವು.
ಗಂಟಲು ಒಡೆದು ಮಾತನಾಡಲು ಕಷ್ಟವಾದಾಗ ಸ್ವಲ್ಪ ಶುಂಠಿ, ಒಂದೆರಡು ಲವಂಗ ಮತ್ತು ನಾಲ್ಕು ಉಪ್ಪಿನ ಹರಳುಗಳನ್ನು ಅಗಿದು ಚಪ್ಪರಿಸಿದರೆ ಗುಣವಾಗುತ್ತದೆ.
ಸುಟ್ಟಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಾಂತವಾಗುತ್ತದೆ ಮತ್ತು ಗಾಯ ಶೀಘ್ರವೇ ಗುಣವಾಗಲು ಸಹಾಯ ಮಾಡುತ್ತದೆ.
ಬಾಯಿಯ ಹುಣ್ಣು ನಿವಾರಿಸಲು ದಿನಕ್ಕೆ ನಾಲ್ಕು ಬಾರಿ ಜೇನು ತುಪ್ಪವನ್ನು ಹಚ್ಚಬೇಕು.
ಕುರಿಯ ಹಾಲನ್ನು ದಿನವೂ ಸೇವಿಸುವುದರಿಂದ ದೇಹ ಶಕ್ತಿ ಅಧಿಕವಾಗುತ್ತದೆ.

ವೆಬ್ದುನಿಯಾವನ್ನು ಓದಿ