ನೆಗಡಿ

ಶುಕ್ರವಾರ, 21 ನವೆಂಬರ್ 2014 (14:38 IST)
ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ.
 
ಒಂದು ಬಟ್ಟಲು ಎಲೇನೀರಿಗೆ ಸ್ವಲ್ಪ ಬೆಲ್ಲ ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಉರಿ ಮೂತ್ರ ನಿವಾರಣೆ ಆಗುವುದು.
 
ಸುಟ್ಟಗಾಯಕ್ಕೆ ತಕ್ಷಣ ಜೇನುತುಪ್ಪ ಹಚ್ಚುವುದರಿಂದ ಉರಿ ಶಾಂತವಾಗುತ್ತದೆ ಮತ್ತು ಗಾಯ ಶೀಘ್ರವೇ ಮಾಯವಾಗಲು ಸಹಾಯ ಮಾಡುತ್ತದೆ.
 
ಬಾಯಿಯ ಹುಣ್ಣು ನಿವಾರಿಸಲು ದಿನಕ್ಕೆ ನಾಲ್ಕು ಬಾರಿ ಜೇನು ತುಪ್ಪವನ್ನು ಹಚ್ಚಬೇಕು.
ಹಲ್ಲುಗಳಿಂದ ಸೇಬನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಹೊಳಪು ಹೆಚ್ಚಿ ವಸಡುಗಳು ಸಹ ಗಟ್ಟಿಯಾಗುತ್ತವೆ.
 

ವೆಬ್ದುನಿಯಾವನ್ನು ಓದಿ