ಹೃದಯಘಾತ-ಪಾರ್ಶ್ವಮಾಯು ನಿರ್ಮೂಲನೆ, ಇದರಿಂದ ಅಪಾಯ ತಡೆ ಗಟ್ಟಿ

ಸೋಮವಾರ, 29 ಆಗಸ್ಟ್ 2016 (12:11 IST)
ದೊಡ್ಡವರಿಗೆ ಬರುತ್ತಿದ್ದ ಹೃದಯ ಕಾಯಿಲೆಗಳು ಇದೀಗ ಯುವ ಜನಾಂಗಕ್ಕೂ ಬರಲು ಪ್ರಾರಂಭಿಸಿವೆ. ಆರೋಗ್ಯದ ಬಗ್ಗೆ ಪ್ರತಿ ಕ್ಷಣದಲ್ಲೂ ಕಾಳಜಿ ವಹಿಸುವ ಪರಿಸ್ಥಿತಿ ಎದುರಾಗಿದೆ. ಹೃದಯ ಕಾಯಿಲೆ, ಪಾರ್ಶ್ವವಾಯು ಕಾಯಿಲೆಗಳು ತಡೆಗಟ್ಟಲು ಅಥವಾ ಬರದಂತೆ ನೋಡಿಕೊಳ್ಳಲು ಹಲವು ಅಭ್ಯಾಸಗಳನ್ನು ನೀವೂ ರೂಢಿಸಿಕೊಳ್ಳಬೇಕು. ಅವುಗಳಲ್ಲಿ ಮುಖ್ಯವಾದವುಗಳು ಈ ಕೆಳಗಿನಂತಿವೆ. 
ಮೆಡಿಸಿನ್ 
ಹೃದಯ ಕಾಯಿಲೆಗಳು ಬಾರದಂತೆ ನೋಡಿಕೊಳ್ಳಲು ಸಮಯಕ್ಕೆ ತಕ್ಕಂತೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ನಿರಂತರ ತಪ್ಪದೇ ಮಾಡಿಕೊಳ್ಳುವ ಚಿಕಿತ್ಸೆ ಕಾಯಿಲೆಗಳನ್ನು ತಡೆಗಟ್ಟಬಲ್ಲದ್ದು. 
 
ಅಲ್ಲದೇ ರಕ್ತದೋತ್ತಡ, ಕೊಲೆಸ್ಟ್ರಾಲ್, ಮಧುಮೇಹ ಕಾಯಿಲೆಗಳನ್ನು ನಿಯಂತ್ರಿಸಲು ಇದು ಸಹಾಯಕಾರಿ.
 
ನಿಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಗಾತ್ತಾ ?
 
ಹೃದಯದ ಸಂಬಂಧಪಟ್ಟ ಕಾಯಿಲೆಗಳು ಬರದಂತೆ ತಡೆಯಲು ನಿತ್ಯ ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಮೌಂಸ,ಮೀನು ಕಡಿಮೆ ಉಪ್ಪು, ಹಾಗೂ ಸಕ್ಕರೆಯನ್ನು ತೆಗೆದುಕೊಳ್ಳಬೇಕು.
 
ಆ್ಯಕ್ಟಿವ್ ಆಗಿ ಇರುವಂತೆ ನೋಡಿಕೊಳ್ಳುವುದು... ದೈಹಿಕ ವ್ಯಾಯಾಮ ಅಷ್ಟೇ ಮುಖ್ಯ.. ಅಲ್ಲದೇ ರಕ್ತದೋತ್ತಡ ನಿಯಂತ್ರಿಸಲು ವ್ಯಾಯಾಮ ಅತಿ ಮುಖ್ಯವಾಗುತ್ತದೆ. ಪಿಟ್‌ನೆಸ್‌ಗೆ ಇದು ಸಹಾಯಕಾರಿ. ತೂಕವನ್ನು ನಿಯಂತ್ರಣದಲ್ಲಿಡುತ್ತದೆ ಅಲ್ಲದೇ ರಕ್ತದೋತ್ತಡವನ್ನು ಸರಿದೂಗಿಸಲು ವ್ಯಾಮಾಯ ಮಾಡಿ. 
 
ತಂಬಾಕು ಸೇವನೆ ನಿಲ್ಲಿಸಿ
ಹೃದಯದ ಕಾಯಿಲೆಗಳಿಗೆ ತಂಬಾಕು ಕೂಡ ಕಾರಣವಾಗಬಲ್ಲದ್ದು, ಸಿಗರೇಟ್, ತಂಬಾಕು, ಹೃದಯಕ್ಕೆ ಹಾನಿಯಾಗಬಲ್ಲವು. ಸಿಗರೇಟು ಸೇದುತ್ತಿದ್ದರೆ ಹೃದಯ ಕಾಯಿಲೆಗಳು ಬರುವುದು ಹೆಚ್ಚು. 
 
ಆಲ್ಕೋಹಾಲ್
ಮದ್ಯಪಾನ ಆರೋಗ್ಯಕ್ಕೆ ಹಾನಿ.. ಅದರಲ್ಲೂ ಹೃಯದಯ ಸಮಸ್ಯೆಗಳು ಬರಲು ಇದು ಕೂಡ ಕಾರಣವಾಗಬಲ್ಲದ್ದು, ಅತಿ ಹೆಚ್ಚು ಮದ್ಯಪಾನ ಸೇವಿಸುತ್ತಿದ್ದರೆ ಹೃದಯ ಕಾಯಿಲೆ ಬರುವ ಸಾಧ್ಯತೆ ಹೆಚ್ಚು..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ