ನೀವು ಸುಂದರವಾಗಿ ಕಾಣಬೇಕಾ ?

ಬುಧವಾರ, 19 ನವೆಂಬರ್ 2014 (15:50 IST)
ಕೂದಲಿಗೆ ಬೆಣ್ಣೆ ಹಚ್ಚುತ್ತಿದ್ದರೆ ಅಪ್ರಾಪ್ತ ವಯಸ್ಸಿನಲ್ಲಿ ನರೆ ಕೂದಲು ಉಂಟಾಗುವ ಸಾದ್ಯತೆಯನ್ನು ತಪ್ಪಿಸಬಹುದು. ನೆಲ್ಲಿಕಾಯಿಯನ್ನು ತೈಲದೊಡನೆ ಬೆರೆಸಿ ತಲೆಗೆ ಹಚ್ಚಿಕೊಳ್ಳುವುದರಿಂದ ಕೇಶದ ಬೆಳವಣಿಗೆ ಹೆಚ್ಚಾಗುತ್ತದೆ.
 
ಬೆಣ್ಣೆಯಿಂದ ತಯಾರಿಸಿದ ಕಾಡಿಗೆಯನ್ನು ನೇತ್ರದ ಹುಬ್ಬುಗಳಿಗೆ ಹಚ್ಚುವುದರಿಂದ ಕಣ್ಣು ಕಾಂತಿಯುತವಾಗಿ ಕಾಣುತ್ತವೆ.
 
ಸೇಬು ಹಣ್ಣನ್ನು ಹಲ್ಲಿನಿಂದ ಕಚ್ಚಿ ಸಿಪ್ಪೆ ಸಹಿತ ಊಟವಾದ ನಂತರ ತಿನ್ನುವುದರಿಂದ ದೈಹಿಕ ಬೆಳವಣಿಗೆ ಚೆನ್ನಾಗಿ ಆಗುತ್ತದೆ.
 
ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಮುಖಕ್ಕೆ ಲೇಪಿಸಿಕೊಂಡರೆ ಒಂದು ವಾರದೊಳಗೆ ಮೊಡವೆಗಳು ನಿವಾರಣೆಯಾಗುವವು.

ವೆಬ್ದುನಿಯಾವನ್ನು ಓದಿ