ಮೂಗಿನಲ್ಲಿ ರಕ್ತಸ್ರಾವವಾಗುವುದನ್ನು ತಡೆಯಲು ಇಲ್ಲಿದೆ ಪರಿಹಾರ
ಮಂಗಳವಾರ, 17 ಏಪ್ರಿಲ್ 2018 (15:04 IST)
ಬೆಂಗಳೂರು : ಬೇಸಿಗೆಕಾಲ ಹಲವೊಂದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಲ್ಲಿ ಮೂಗಿನಲ್ಲಿ ಕಂಡುಬರುವ ರಕ್ತಸ್ರಾವವು ಒಂದು. ಮೂಗನ್ನು ತೀವ್ರವಾಗಿ ಉಜ್ಜಿಕೊಂಡಾಗ ಒಳಭಿತ್ತಿಗಳಿಗೆ ಹಾನಿಯುಂಟಾಗುತ್ತದೆ ಮತ್ತು ರಕ್ತನಾಳದಲ್ಲಿ ರಂಧ್ರವುಂಟಾಗುತ್ತದೆ. ಇದು ರಕ್ತಸ್ರಾವಕ್ಕೆ ಮುಖ್ಯಕಾರಣವಾಗಿದೆ. ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದನ್ನು ತಡೆಯಲು ಕೆಲವು ಪರಿಹಾರಗಳು ಇಲ್ಲಿವೆ.
ಈರುಳ್ಳಿ ರಸ
ತಾಜಾ ಈರುಳ್ಳಿಯ ರಸವನ್ನು ತೆಗೆದು 2-3 ಹನಿ ರಸವನ್ನು ಎರಡೂ ಹೊಳ್ಳೆಗಳಲ್ಲಿ ಬಿಟ್ಟುಕೊಳ್ಳಿ. ತಲೆಯನ್ನು ಐದು ನಿಮಿಷಗಳ ಕಾಲ ಸ್ವಲ್ಪ ಹಿಂದಕ್ಕೆ ಬಗ್ಗಿಸಿದ ಸ್ಥಿತಿಯಲ್ಲಿಟ್ಟುಕೊಳ್ಳಿ.
ತಂಪು ಒತ್ತಡ
ಒಂದು ಟವೆಲ್‌ನಲ್ಲಿ ಕೆಲವು ಮಂಜುಗಡ್ಡೆ ತುಂಡುಗಳನ್ನು ಸುತ್ತಿ ಅದರಿಂದ ಮೂಗಿನ ಸೇತುವೆಯ ಮೇಲೆ ಮೃದುವಾಗಿ ಒತ್ತಡವನ್ನು ಹೇರಿ. 2-3 ನಿಮಿಷಗಳ ಕಾಲ ಅಥವಾ ನಿಮಗೆ ಆರಾಮ ಅನಿಸುವವರೆಗೆ ಹಾಗೆಯೇ ಉಜ್ಜುತ್ತಿರಿ.
ಕೊತ್ತಂಬರಿ
ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಬ್ಲೆಂಡರ್‌ನಲ್ಲಿ ರಸವನ್ನು ಸಿದ್ಧಗೊಳಿಸಿ. ಇದನ್ನು ಸೋಸಿ 2-3 ಹನಿಗಳಷ್ಟು ರಸವನ್ನು ಎರಡೂ ಹೊಳ್ಳೆಗಳಲ್ಲಿ ಬಿಟ್ಟುಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ