ಮಕ್ಕಳ ಮೆದುಳಿನ ಬೆಳವಣೆಗೆಗೆ ಇಲ್ಲಿದೆ ಮನೆಮದ್ದು

ಬುಧವಾರ, 13 ಡಿಸೆಂಬರ್ 2017 (07:48 IST)
ಬೆಂಗಳೂರು: ಮಾನವನ ದೇಹದಲ್ಲಿ ಅತಿ ಹೆಚ್ಚು ಶಕ್ತಿಯನ್ನು ಬಳಸಿಕೊಳ್ಳುವ ಅಂಗವೆಂದರೆ  ಅದು ಮೆದುಳು. ನಮ್ಮ ಮೆದುಳು ಸಹ ಒಂದು ಸ್ನಾಯು ಅದನ್ನು ಹೆಚ್ಚು ಬಳಸಿದಷ್ಟು ಅದರ  ಕಾರ್ಯ ಕ್ಷಮತೆ ಹೆಚ್ಚುತ್ತಾ ಹೋಗುತ್ತದೆ. ಇದು ನಮ್ಮ ದೇಹದಲ್ಲಿರುವ ಅತ್ಯಂತ ಸೂಕ್ಷ ಅಂಗವಾಗಿದೆ. ಇದು ಮುಖ್ತವಾಗಿ  ಜ್ಞಾಪಕ ಶಕ್ತಿ, ಏಕಾಗ್ರತೆ, ದೈಹಿಕ ಮತ್ತು ಅಸಂಖ್ಯಾತವಾದ ಮಾನವನ ವರ್ತನೆಗಳ ಲಕ್ಷಣಗಳನ್ನು ನಿರ್ಧರಿಸುತ್ತದೆ. ಹಾಗಾಗಿ ಮೆದುಳಿನ ಶಕ್ತಿ ವೃದ್ಧಿಸುವಂತೆ ನಾವು ಹೆಚ್ಚಿನ ಆಹಾರ ಸೇವಿಸಬೇಕು. ಕೆಲವು ಆಹಾರಗಳು ನಮ್ಮ ಮೆದುಳಿನ ಶಕ್ತಿ ಹೆಚ್ಚಿಸುವುದಕ್ಕೆ ನೇರವಾಗುತ್ತದೆ.


ಪುದೀನ ಸೊಪ್ಪನ್ನು ಉಪಯೋಗಿಸುವುದರಿಂದ ಅದು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆ ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಇದು ಮೆದುಳಿನ ಎಲ್ಲಾ ಕ್ರಿಯೆಗಳಿಗೆ ನೇರವಾಗುತ್ತದೆ. ಕೆಂಪು ಸೇಬುವನ್ನು ಮಕ್ಕಳಿಗೆ ಕೊಡುವುದರಿಂದ ಅದರಲ್ಲಿನ ಕೆಲವು ವರ್ಗದ ರಾಸಾಯನಿಕಗಳು ಮಾರಕ ಕಾಯಿಲೆಗಳಾದ ಪರ್ಕಿಸಸ್ ಮತ್ತು ಅಲ್ಝೆಮರ್ ನಿಂದ ಮೆದುಳನ್ನು ರಕ್ಷಿಸುತ್ತದೆ. ಮೆದುಳು ಕ್ರಿಯಾತ್ಮಕವಾಗಿರಲು ನಮ್ಮ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಮೆದುಳಿನ ಮೂರನೇ ಒಂದು ಭಾಗ ನೀರಿನಿಂದ ತುಂಬಿರುವ ಕಾರಣ ನೀರಿನಾಂಶ ಕಡಿಮೆಯಾದರೆ ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸರಿಯಾಗಿ ನೀರನ್ನು ಕುಡಿಯಿರಿ.


ಹೂಕೋಸುವಿನಲ್ಲಿ ವಿಟಮಿನ್ ಕೆ ಅಧಿಕವಾಗಿರುವುದರಿಂದ ಇದು ಗ್ರಹಿಕೆಯ ಕ್ರಿಯೆಯನ್ನು ವೃದ್ಧಿಸುತ್ತದೆ. ಹಾಗೆ ಕುಂಬಳಕಾಯಿ ಬೀಜಗಳಲ್ಲಿ ಅಮಿನೊ ಆಸಿಡ್ ಸಮೃದ್ಧವಾಗಿರುವುದರಿಂದ ಇದು ನರಪೇಕ್ಷಕವು ಸರಿಯಾದ ರೀತಿಯಲ್ಲಿ ಕೆಲಸಮಾಡಿ ಆತಂಕವನ್ನು ಕಡಿಮೆಮಾಡುತ್ತದೆ. ಹಾಗೆಯೇ ತೆಂಗಿನೆಣ್ಣೆಯನ್ನು ಬಳಸುವುದರಿಂದ ಅದು ಕೆಟೊನ್ಸ್ ನ್ನು ನಿರ್ಮಿಸುತ್ತದೆ. ಇದು ಮೆದುಳಿಗೆ ಇಂಧನವನ್ನು ಒದಗಿಸುತ್ತದೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಕೋಲಿನ್ ಅಂಶವು ಸಮೃದ್ಧವಾಗಿರುವುದರಿಂದ ಇದು ಮೆದುಳುನಲ್ಲಿರುವ ನರಕೋಶಕ್ಕೆ ಸಂಕೇತಗಳನ್ನು ಕಳುಹಿಸುವ ಕೆಲಸವನ್ನು ವೇಗವಾಗಿ ಮಾಡುತ್ತದೆ ಎಂದು ಇತ್ತಿಚಿನ ಸಂಶೋಧನೆಯಿಂದ ಸಾಬೀತಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ