ಕಾಲು ಬಿರುಕು ಸಮಸ್ಯೆಗೆ ಏನೇನು ಮಾಡಬೇಕು?

ಶುಕ್ರವಾರ, 13 ಜನವರಿ 2017 (14:03 IST)
ಬೆಂಗಳೂರು: ಚಳಿಗಾಲ ಬಂತೆಂದರೆ ಸಾಕು. ಕೆಲವರಿಗೆ ಇದೊಂದು ಸಮಸ್ಯೆ. ಹಿಂಗಾಲು ಒಡೆದು ಅತೀವ ನೋವು ಕೊಡುವುದು. ಇದಕ್ಕೆ ಶೈತ್ಯ ಹವೆ, ಉಪಯೋಗಿಸುವ ಸಾಬೂನು, ತುಂಬಾ ಹೊತ್ತು ನೀರಲ್ಲಿ ನಿಲ್ಲುವುದು, ಜಾಸ್ತಿ ತೂಕ ಮುಂತಾದವು ಕಾರಣ. ಮನೆಯಲ್ಲೇ ಮಾಡಬಹುದಾದ ಮದ್ದು ಏನೆಲ್ಲಾ ನೋಡೋಣ.


ಕಾಲು ಒಡೆಯುವ ಸಮಸ್ಯೆ ನೀಡುವ ಕಿರಿ ಕಿರಿ ತುಂಬಾ ದೊಡ್ಡದು. ತೀವ್ರ ನೋವು, ನಡೆದಾಡಲೂ ಆಗದಂತ ಪರಿಸ್ಥಿತಿಗೆ ತಂದೊಡ್ಡುವುದಲ್ಲದೆ, ಕಾಲಿನ ಅಂದಗೆಡಿಸುತ್ತದೆ. ಕೆಲವರಿಗೆ ರಕ್ತ ಸೋರಿ ಕೀವಿನಂತಾಗುವುದೂ ಇದೆ.

ರಾತ್ರಿ ಮಲಗುವ ಮೊದಲು ಕಾಲನ್ನು ಹದ ಬಿಸಿ ನೀರಿನಲ್ಲಿ ತೊಳೆದುಕೊಂಡು ಚೆನ್ನಾಗಿ ಒಣಗಿಸಿ ಕಾಲು ಚೀಲ ಧರಿಸಿ ಮಲಗಿ. ಇದಕ್ಕೆ ತೆಂಗಿನ ಎಣ್ಣೆ ಹಚ್ಚಿಕೊಂಡು ಮಲಗಿದರೆ ಇನ್ನೂ ಉತ್ತಮ. ಅಂತೂ ಆ ಭಾಗ ಡ್ರೈ ಸ್ಕಿನ್ ಹಾಗಿದ್ದರೆ, ನೋವು ಜಾಸ್ತಿಯಾಗುತ್ತದೆ.

ಗ್ಲಿಸರಿನ್ ಹಾಕಿ ಕಣ್ಣೀರು ಸುರಿಸಬಹುದು ಎಂದು ನಮಗೆ ಗೊತ್ತು. ಅದೇ ಗ್ಲಿಸರಿನ್ ನ್ನು ಮಲಗುವ ಮುಂಚೆ ಕಾಲಿಗೆ ಹಚ್ಚಿ ಮಲಗಿಕೊಳ್ಳಿ. ಇದು ತೇವಾಂಶ ಉಳಿಸುತ್ತದೆ. ಎಳ್ಳೆಣ್ಣೆ ಹಚ್ಚುವುದೂ ಒಳ್ಳೆಯ ಉಪಾಯ.

ನಿಂಬೆ ರಸವನ್ನು ಬಿಸಿ ನೀರಿಗೆ ಹಾಕಿಕೊಂಡು ಮಲಗುವ ಮೊದಲು ಕಾಲು ಅದರಲ್ಲಿಟ್ಟುಕೊಂಡರೆ ಒಳ್ಳೆಯದು.  ಇದೆಲ್ಲಾ ಸಾಧ್ಯವಿಲ್ಲದಿದ್ದರೆ, ಮನೆಯಲ್ಲಿ ವೇಸ್ಟ್ ಆಗಿ ಮೂಲೆಯಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ಕವರ್ ನ್ನು ಕಾಲಿಗೆ ಕಟ್ಟಿಕೊಂಡು ಮಲಗಿದರೂ ಸಾಕು. ಅದು ತೇವಾಂಶ ಕಾಪಾಡುತ್ತದೆ. ಮಾಡಿ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ