ಹಲ್ಲು ನೋವಿಗೆ ಮನೆಯಲ್ಲೇ ಪರಿಹಾರ

ಶುಕ್ರವಾರ, 17 ಫೆಬ್ರವರಿ 2017 (11:09 IST)
ಬೆಂಗಳೂರು: ಹಲ್ಲು ನೋವು ಕೊಡುವ ಸಂಕಟ ಅಷ್ಟಿಷ್ಟಲ್ಲ. ತೂತು ಬಿದ್ದ ಹಲ್ಲು ಸಹಿಸಲಾರದ ನೋವು ಕೊಡುತ್ತಿದ್ದರೆ, ಮನೆಯಲ್ಲೇ ಮಾಡಬಹುದಾದ ಪರಿಹಾರಗಳಿವೆ. ಅವು ಯಾವುವು ನೋಡೋಣ

 
ಬೆಳ್ಳುಳ್ಳಿ

ಬೆಳ್ಳುಳ್ಳಿ ಸಿಪ್ಪೆ ತೆಗೆದು ಚೆನ್ನಾಗಿ ಜಜ್ಜಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ನೋವಿರುವ ಹಲ್ಲಿನ ಜಾಗಕ್ಕೆ ಇಟ್ಟುಕೊಳ್ಳಿ. ಬೆಳ್ಳುಳ್ಳಿಯ ಖಾರಕ್ಕೆ ನೋವು ಗೊತ್ತಾಗದು.

ಲವಂಗ

ಲವಂಗದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿಯಿದೆ. ಹಾಗಾಗಿ ನೋವಿರುವ ಜಾಗಕ್ಕೆ ಲವಂಗವನ್ನು ಇಟ್ಟುಕೊಳ್ಳುವುದರಿಂದ ನೋವೂ ಉಪಶಮನವಾಗುತ್ತದೆ, ಹಲ್ಲಿನಲ್ಲಿರುವ ಕೀಟಾಣುಗಳೂ ನಾಶವಾಗುತ್ತದೆ.

ಕಾಳುಮೆಣಸು ಮತ್ತು ಉಪ್ಪು

ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಸ್ವಲ್ಪವೇ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈ ದಪ್ಪ ಪೇಸ್ಟ್ ನ್ನು ನೋವಿರುವ ಜಾಗಕ್ಕೆ ಹಚ್ಚಿಕೊಳ್ಳಿ.

ಈರುಳ್ಳಿ

ನೋವು ಪ್ರಾರಂಭವಾದ ಹಂತದಲ್ಲಿ ಹಸಿ ಈರುಳ್ಳಿಯನ್ನು ಜಗಿದು ಬಾಯಲ್ಲಿಟ್ಟುಕೊಳ್ಳುವುದರಿಂದ ನೋವು ಕಡಿಮೆಯಾಗಬಹುದು.

ಉಪ್ಪು ನೀರು

ಹದ ಬಿಸಿ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿಕೊಳ್ಳುವುದರಿಂದ ಬಾಯಲ್ಲಿರುವ ಕೀಟಾಣುಗಳು ನಾಶವಾಗಿ ಶುಚಿಯಾಗುತ್ತದೆ. ಇದರಿಂದ ನೋವಿಗೆ ಕಾರಣವಾಗುವ ಅಂಶಗಳೂ ನಿವಾರಣೆಯಾಗುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ