ಬೆಂಗಳೂರು: ಚಳಿಗಾಲದಲ್ಲಿ ಹೆಚ್ಚಿನವರಿಗೆ ಕಾಲಿನ ಹಿಮ್ಮಡಿ ಒಡೆದು ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ಬರುತ್ತದೆ. ಈ ಸಮಸ್ಯೆಗೆ ಕೆಲವು ಮನೆ ಮದ್ದು ಮಾಡಿ ನೋಡಬಹುದು. ಅವು ಯಾವುವು ನೋಡೋಣ.
ವ್ಯಾಸಲಿನ್ ಮತ್ತು ನಿಂಬೆ ರಸ
ರಾತ್ರಿ ಮಲಗುವ ಮುನ್ನ 15 ನಿಮಿಷ ಹದ ಬಿಸಿ ನೀರಿನಲ್ಲಿ ಕಾಲು ಅದ್ದಿಡಿ. ನಂತರ ನಿಂಬೆ ರಸದ ಜತೆಗೆ ವ್ಯಾಸಲಿನ್ ಕ್ರೀಂ ಹಚ್ಚಿ ಮಲಗಿ.
ಜೇನು ತುಪ್ಪ
ಅರ್ಧ ಬಕೆಟ್ ಹದಬಿಸಿನೀರಿಗೆ ಒಂದು ಕಪ್ ಜೇನು ತುಪ್ಪ ಹಾಕಿ ಅದ್ದಿಡಿ. ನಂತರ ಮೃದುವಾಗಿ ಮಸಾಜ್ ಮಾಡಿ. ಹೀಗೆ ಕೆಲವು ನಿಮಿಷಗಳ ಕಾಲ ಮಾಡಿದರೆ ಸಾಕು.
ಅಲ್ಯುವೀರಾ
ಹದ ಬಿಸಿ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಕಾಲು ಇಟ್ಟುಕೊಳ್ಳಿ. ನಂತರ ಅಲ್ಯುವೀರಾ ಜೆಲ್ ಹಚ್ಚಿಕೊಂಡು ಕೆಲ ಕಾಲ ಹಾಗೇಬಿಡಿ.
ಸಾಕ್ಸ್
ಮಲಗುವ ಮೊದಲು ರಾತ್ರಿ ವ್ಯಾಸಲಿನ್ ಹಚ್ಚಿಕೊಂಡು ಕಾಟನ್ ಸಾಕ್ಸ್ ಹಾಕಿಕೊಂಡು ಮಲಗಿಕೊಳ್ಳಿ. ಇದರಿಂದ ಕಾಲಿನ ತೇವಾಂಶ ಉಳಿದು ಒಡೆತದ ಕಿರಿ ಕಿರಿ ತಪ್ಪುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ