ಮುಟ್ಟಿನ ದಿನಗಳಲ್ಲಿ ಚಹಾ ಸೇವನೆ ಈ ಕಾರಣಕ್ಕೆ ಉತ್ತಮವಲ್ಲ!
ಹೆಚ್ಚಿನ ಹೆಣ್ಣು ಮಕ್ಕಳಿಗೆ ಮುಟ್ಟಿನ ದಿನಗಳಲ್ಲಿ ಬೆನ್ನು, ಸೊಂಟ ನೋವು ಅಥವಾ ಮಾಂಸ ಖಂಡಗಳ ಸೆಳೆತದಂತಹ ಸಮಸ್ಯೆಗಳಿದ್ದೇ ಇರುತ್ತವೆ. ಚಹಾದಲ್ಲಿರುವ ಕಫೈನ್ ಅಂಶ ಈ ನೋವುಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಮುಟ್ಟಿನ ದಿನದಲ್ಲಿ ಚಹಾ ಸೇವಿಸದೇ ಇರುವುದೇ ಉತ್ತಮ ಎಂದು ಇತ್ತೀಚೆಗಿನ ವರದಿಯೊಂದರಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.