ಸ್ಟ್ರೆಚ್ ಮಾರ್ಕ್ಸ್ ಇದೆಯಾ…? ಇಲ್ಲಿದೆ ನೋಡಿ ಮನೆಮದ್ದು

ಶುಕ್ರವಾರ, 8 ಡಿಸೆಂಬರ್ 2017 (08:01 IST)
ಬೆಂಗಳೂರು: ಸ್ಟ್ರೆಚ್ ಮಾರ್ಕ್ಸ್ ಪ್ರತಿ ತಾಯಂದಿರಿಗೂ ಕಾಡುವ ಒಂದು ಸಮಸ್ಯೆ. ಮಗುವಾದ ನಂತರ ಹೊಟ್ಟೆ ಹಾಗು ಸೊಂಟದ ಭಾಗದಲ್ಲಿ ಕಂಡುಬರುವ ಗೆರೆಗಳೇ ಸ್ಟ್ರೆಚ್ ಮಾರ್ಕ್ಸ್. ಇದರಿಂದಾಗಿ ಬಹಳಷ್ಟು ತಾಯಂದಿರು ತಮ್ಮಗಿಷ್ಟವಾದ ಬಟ್ಟೆ ಧರಿಸಲು ಹಿಂದೇಟು ಹಾಕುತ್ತಾರೆ. ಈ ಮಾರ್ಕ್ಸ್ ನ್ನು ಹೋಗಲಾಡಿಸಲು ಜಾಹೀರಾತಿನಲ್ಲಿ ಬರುವ ಅನೇಕ ಕ್ರೀಮ್ ಗಳನ್ನುಉಪಯೋಗಿಸುತ್ತಾರೆ. ಆದರು ಅದು ಹೋಗೋದೆ ಇಲ್ಲ.


ಸ್ಟ್ರೆಚ್ ಮಾರ್ಕ್ಸ್ ನ್ನು ಮನೆ ಮದ್ದಿನಿಂದ ಹೋಗಲಾಡಿಸಬಹುದು. ಅದೇನೆಂದರೆ ಒಂದು ಬಟ್ಟಲಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಹಾಕಿ ಅದನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಆಲೋವೆರಾ ಎಲೆಯನ್ನು ಹಾಕಿ. ಆಲೋವೆರಾ ಎಲೆಯ ರಸ ಎಣ್ಣೆಯಲ್ಲಿ ಚೆನ್ನಾಗಿ ಬಿಟ್ಟ ನಂತರ ಅದನ್ನು ಸ್ವಲ್ಪ ತಣ್ಣಗಾಗಿಸಿ,ಉಗುರು ಬಿಸಿ ಇದ್ದಾಗ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿಕೊಳ್ಳಿ. ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಹೀಗೆ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ಮಾಯವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ