ಬೆಂಗಳೂರು : ಬೇಸಿಗೆಕಾಲದಲ್ಲಿ ತಂಪಾದ ಐಸ್ ಕ್ರೀಂ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಬಾಳೆಹಣ್ಣಿನ ಐಸ್ ಕ್ರೀಂ ತಯಾರಿಸಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು : 2 ಬಾಳೆಹಣ್ಣು, ½ ಕಪ್ ಹಾಲು, ಚಾಕಲೇಟ್, ಕೊಕೊ ಪೌಡರ್ 1 ಚಮಚ.
ಬಾಳೆಹಣ್ಣನ್ನು ಪೀಸ್ ಮಾಡಿಕೊಂಡು ಅದನ್ನು ರಾತ್ರಿಯಿಡಿ ಫ್ರಿಜರ್ ನಲ್ಲಿಡಿ. ಬೆಳಿಗ್ಗೆ ಅದನ್ನು ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಹಾಲು ಚಾಕಲೇಟ್ ಹಾಕಿ ರುಬ್ಬಿ. ಅದಕ್ಕೆ ಕೊಕೊ ಪೌಡರ್ ಹಾಕಿ ಮತ್ತೆ ರುಬ್ಬಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ 8 ಗಂಟೆಗಳ ಕಾಲ ಫ್ರಿಜರ್ ನಲ್ಲಿಡಿ. ಬಳಿಕ ಬಾಳೆಹಣ್ಣಿನ ಐಸ್ ಕ್ರೀಂ ರೆಡಿಯಾಗುತ್ತದೆ.