ಆರೋಗ್ಯಕ್ಕೆ ಶುಂಠಿ ಚಹಾ ಎಷ್ಟು ಪ್ರಯೋಜನ?

ಶನಿವಾರ, 15 ಜನವರಿ 2022 (15:38 IST)
ಅಡುಗೆಯನ್ನು ಮಾತ್ರ ಸ್ವಾದಿಷ್ಟವಾಗಿಸುವುದಲ್ಲದೇ, ಅನೇಕ ರೋಗಗಳನ್ನು ಗುಣಪಡಿಸುವ ಔಷಧಿಯು ಔದು.

ಶುಂಠಿಯಲ್ಲಿನ ತೀಕ್ಷ್ಣವಾದ ಘಾಟು ಮತ್ತು ರುಚಿಗಳು ಅದರಲ್ಲಿನ ಜಿಂಜೆರೋಲ್, ಶೊಗಾಲ್ ಮತ್ತು ಜಿಂಜೆರೋನ್ ಗಳೆಂಬ ಸಸ್ಯತೈಲಗಳ ಮಿಶ್ರಣದಿಂದ ಉಂಟಾಗುತ್ತದೆ.

ಶತಮಾನಗಳಿಂದಲೂ ಶುಂಠಿಯನ್ನು ಅಡುಗೆಯಲ್ಲಿ ಸಾಂಬಾರು ಪದಾರ್ಥವಾಗಿ ವ್ಯಾಪಕವಾಗಿ ಬಳಕೆ ಮಾಡುತ್ತಿದ್ದರು ಸಹ, ಇದೊಂದು ದಿವ್ಯೌಷಧವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದು ನಿಮಗೆ ಗೊತ್ತಾ? ತೂಕ ಇಳಿಕೆ ಮಾಡಿಕೊಳ್ಳಲು, ಅನೇಕ ಅಪಾಯಕಾರಿ ರೋಗಗಳು ಬಾರದಂತೆ ತಡೆಯಲು ಶುಂಠಿ ಸಹಾಯ ಮಾಡುತ್ತದೆ.

ಶುಂಠಿಯಲ್ಲಿರುವ ಜಿಂಜರೋಲ್ಸ್ ಎಂಬ ಸಕ್ರಿಯ ಸಂಯುಕ್ತಗಳು ಬಾಯಿಯ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುತ್ತದೆ. ಮುಖ್ಯವಾಗಿ ಈ ಬ್ಯಾಕ್ಟೀರಿಯಾವು ದಂತ ಸಮಸ್ಯೆಗೂ ಕೂಡ ಕಾರಣವಾಗಬಹುದು.

ಅಲ್ಲದೇ, ತಾಜಾ ಶುಂಠಿಯಲ್ಲಿ ಕೆಲವು ರಾಸಾಯನಿಕ ಸಂಯುಕ್ತಗಳು ನಿಮ್ಮ ದೇಹವನ್ನು ಸೂಕ್ಷ್ಮಜೀವಿಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ.

ವಾಕರಿಕೆ

ವಿಶೇಷವಾಗಿ ಗರ್ಭಾವಸ್ಥೆಯಲ್ಲಿರುವ ಸಮಯದಲ್ಲಿ ಬಹುತೇಕರಿಗೆ ವಾಕರಿಕೆ ಉಂಟಾಗುತ್ತದೆ. ಇದನ್ನು ಪರಿಣಾಮಕಾರಿಯಾಗಿ ತಡೆಯಲು ಶುಂಠಿಯು ನಿಮಗೆ ಸಹಾಯ ಮಾಡುತ್ತದೆ.

ಇದು ಕರುಳಿನಲ್ಲಿ ಅನವಶ್ಯಕ ಅನಿಲವನ್ನು ಒಡೆದು, ತೊಡೆದು ಹಾಕುವ ಮೂಲಕ ವಾಕರಿಕೆಯನ್ನು ನಿವಾರಣೆ ಮಾಡುತ್ತದೆ. ಶುಂಠಿಯು ಉರಿಯೂತ ನಿವಾರಕವಾಗಿದ್ದು, ಊತವನ್ನು ಕಡಿಮೆ ಮಾಡುತ್ತದೆ.

 ಕ್ಯಾನ್ಸರ್

ನೋಯುತ್ತಿರುವ ಸ್ನಾಯುಗಳಿಗೆ ಚಿಕಿತ್ಸೆ ನೀಡುತ್ತದೆ. ಶುಂಠಿಯಲ್ಲಿರುವ ಕೊಲೊರೆಕ್ಟಲ್, ಗ್ಯಾಸ್ಟ್ರಿಕ್, ಅಂಡಾಶಯ, ಯಕೃತ್ತು, ಚರ್ಮ, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಂತಹ ಕೆಲವು ಕ್ಯಾನ್ಸರ್ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
ಶುಂಠಿಯ ಸೇವೆನೆಯಿಂದ ದೇಹದ ಇನ್ಸುಲಿನ್ ಅನ್ನು ಉತ್ತಮವಾಗಿ ನಿರ್ವಹಿಸಬಹುದು. ಅಲ್ಲದೇ, ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮುಟ್ಟಿನ ನೋವು

ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಹೊಟ್ಟೆಯಲ್ಲಿ ಸೆಳೆತವನ್ನು ಅನುಭವಿಸುವ ಅನೇಕ ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಶುಂಠಿ ಪುಡಿಯನ್ನು ಬೆರಸಿದ ಹಾಲನ್ನು ಕುಡಿಯುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
ನಿಮಗೆ ತಿಳಿದಿರಲಿ, ಶುಂಠಿಯನ್ನು ದಿನನಿತ್ಯ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

 ಅರ್ಜಿಣ ಸಮಸ್ಯೆ

ಡಿಸ್ಪೆಪ್ಸಿಯಾ ಎಂದು ಕರೆಯಲ್ಪಡುವ ದೀರ್ಘಕಾಲದ ಅಜೀರ್ಣದಿಂದ ನೀವು ಬಳಲುತ್ತಿದ್ದರೆ, ಶುಂಠಿಯು ನಿಮಗೆ ಸಹಾಯ ಮಾಡಬಹುದು. ಊಟಕ್ಕೆ ಮುಂಚೆ ಶುಂಠಿಯ ಸೇವನೆಯು ವೇಗವಾಗಿ ನಿಮ್ಮ ಹೊಟ್ಟೆಯನ್ನು ಖಾಲಿ ಮಾಡುತ್ತದೆ. ನಿಮ್ಮ ಅರ್ಜಿಣ ಸಮಸ್ಯೆಯನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೇ, ತೂಕ ಇಳಿಕೆಗೂ ಸಹಾಯ ಮಾಡುತ್ತದೆ.

 ಚಳಿಗಾಲ

ಶುಂಠಿಯಲ್ಲಿನ ಪೋಷಕಾಂಶಗಳು ಚಲಿಗಾಲದಲ್ಲಿ ಮೈ ಬೆಚ್ಚಗೊಳಿಸುತ್ತದೆ. ಹಾಗಾಗಿ ಶುಂಠಿಯ ಕಷಾಯವನ್ನು ಆಗಾಗ್ಗೆ ನಿಯಮಿತವಾಗಿ ಸೇವನೆ ಮಾಡಬೇಕು. ಒಂದು ಲೋಟ ನೀರಿಗೆ ಸ್ವಚ್ಛವಾಗಿ ತೊಳೆದ ಶುಂಠಿಯನ್ನು ಹಾಕಿ, ಕುದಿಸಿ. ಸೋಸಿಕೊಂಡ ನಂತರ ರುಚಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿಯಿರಿ. ಇದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ