ಬೆಂಗಳೂರು : ಹೆಚ್ಚು ಉಪ್ಪು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ಹೃದ್ರೋಗ ಸಮಸ್ಯೆ ಹಾಗೂ ಪಾರ್ಶ್ವವಾಯು ಸಮಸ್ಯೆ ಬರುವ ಸಾಧ್ಯತೆ ಇದೆ. ಆದಕಾರಣ ಪ್ರತಿದಿನ ಎಷ್ಟು ಉಪ್ಪು ಸೇವಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಆಹಾರಕ್ಕೆ ನೀವು ಉಪ್ಪು ಸೇರಿಸದಿದ್ದರೂ ಸಹ ನೀವು ಉಪ್ಪನ್ನು ಬೇರೆ ಆಹಾರಗಳಿಂದ ಸೇವಿಸುತ್ತಾರೆ. ಯಾಕೆಂದರೆ ಬೆಳಗಿನ ಉಪಹಾರ ಧಾನ್ಯಗಳು, ಸೂಪ್, ಬ್ರೆಡ್ ಮತ್ತು ಸಾಸ್ ಗಳಂತಹ ಆಹಾರದಲ್ಲಿ ಉಪ್ಪಿರುತ್ತದೆ. ಆದಕಾರಣ ವಯಸ್ಕರು ಮತ್ತು 11 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ದಿನಕ್ಕೆ 6ಗ್ರಾಂ (ಸುಮಾರು 1 ಚಮಚ)ಉಪ್ಪು ತಿನ್ನಬೇಕು. ಅದಕ್ಕಿಂತ ಹೆಚ್ಚು ತಿನ್ನಬಾರದು. ಅದಕ್ಕಿಂತ ಚಿಕ್ಕ ಮಕ್ಕಳು ಇನ್ನೂ ಕಡಿಮೆ ತಿನ್ನಬೇಕು.