ನೀವೂ ದಿನಕ್ಕೆ ಎಷ್ಟು ಬಾರಿ ತಿನ್ನುತ್ತೀರಿ?

ಶುಕ್ರವಾರ, 29 ಜುಲೈ 2016 (12:05 IST)
ಎಲ್ಲರೂ ಡಯೆಟ್ ಕಡೆಗೆ ಗಮನ ಹರಿಸುತ್ತಾರೆ. ದಿನದಲ್ಲಿ ಎಷ್ಟು ಬಾರಿ ಆಹಾರ ಸೇವನೆ ಮಾಡಬೇಕು ಎಂಬುದರ ಚಿತ್ತ ಹರಿಸುವುದಿಲ್ಲ. ಯುವಕರು ಎಷ್ಟು ಆಹಾರ ತೆಗೆದುಕೊಳ್ಳಬೇಕು. ಮಧ್ಯ ವಯಸ್ಸಿನವರು ಹಾಗೂ ವೃದ್ಧರು ಎಷ್ಟು ಆಹಾರ ತೆಗೆದುಕೊಳ್ಳಬೇಕು ಎಂಬುದರ ಕಡೆಗೆ ಗಮನ ಕೊಡುವುದಿಲ್ಲ.  ದಿನಕ್ಕೆ ನೀವೂ ಎಷ್ಟು ಬಾರಿ ಆಹಾರ ಸೇವನೆ ಜತೆಗೆ ವರ್ಕೌಟ್ ಮಾಡುವುದು ಮುಖ್ಯ.

ಯುವಕ, ಯುವತಿಯರು ಆಹಾರ ವಿಷಯದಲ್ಲಿ ಎಚ್ಚರವಹಿಸಬೇಕಾಗುತ್ತದೆ.ಕೆಲವರು ಆಹಾರ ತಿಂದರೂ ದಪ್ಪಗಾದೆನೆಂದು ಕೊರಗುತ್ತಾರೆ.ವೃದ್ಧರಿಗೆ ದಿನದಲ್ಲಿ ಮೂರು ಬಾರಿ ಊಟ ಸೇವನೆ ಮಾಡಬೇಕು. ಯುವಕರು ದಿನದಲ್ಲಿ 8 ಬಾರಿ ಆಹಾರ ಸೇವನೆ ಮಾಡಬೇಕು. 
 
ಡಯಟೇಷಿಯನ್ ಹತ್ತಿರ ಹೋದ್ರು ನೀವೂ ಸಮತೋಲನ ಆಹಾರ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಾರೆ. ಸಮತೋಲನ ಆಹಾರ ನಿಮ್ಮದಾಗಿರಬೇಕು. ಆಹಾರದಲ್ಲಿ ಆರು ಘಟಕಗಳು ಇರಬೇಕು. ಅದು ಪ್ರಮಾಣಬದ್ಧವಾಗಿರಬೇಕು. ಒಂದೇ ಬಗೆಯ ಹೊಟ್ಟೆಯ ತುಂಬಾ ತಿಂದರೂ ಪ್ರಯೋಜನವಿಲ್ಲ, ಏಕದಳ ಧಾನ್ಯ.. ಬೇಳೆಕಾಳುಗಳು, ಹಸಿ ತರಕಾರಿಸ ಹಾಲು, ಹಣ್ಣುಗಳು ಕೊಬ್ಬು ಆಹಾರವು ನಿಮ್ಮ ಊಟದಲ್ಲಿರಲಿ.
 
ತೂಕ ಕಡಿಮೆ ಮಾಡಿಕೊಳ್ಳಬೇಕೇ? ಹಾಗಾದರೆ ಸಿಂಪಲ್ ಆಗಿರುವ ಈ ವಿಧಾನವನ್ನು ನೀವೂ ಅನುಸರಿಸಲೆಬೇಕು. ದೇಹದಲ್ಲಿ ಕ್ಯಾಲೋರಿ ಪ್ರಮಾಣ ಹೆಚ್ಚಾಗಿದ್ರೆ ಅದನ್ನು ನಿಯಂತ್ರಿಸುವುದು ಉತ್ತಮವಾದ ಮಾರ್ಗ. ಆದ್ದರಿಂದ ಊಟ ಸೇವಿಸುವ ಮುನ್ನ ನಾವು ಯಾವುದನ್ನು ತಿನ್ನುತ್ತೇವೆ ಎಂಬುದರ ಕಡೆಗೆ ಗಮನವಿರಲಿ. ಇನ್ನೂ ಕುತೂಹಲಕಾರಿ ಅಂಶ ಎಂದರೆ ನೀವೂ ದಿನಕ್ಕೆ ಎಷ್ಟು ಬಾರಿ ವರ್ಕೌಟ್ ಮಾಡಲು ಹಾಗೂ ಸ್ಲಿಮ್ ಫಿಗರ್ ನಿಮ್ಮದಾಗಿಸಲು ಈ ರೀತಿ ಮಾಡುವುದು ಉತ್ತಮ. 
 
ಆಗಾಗ್ಗೆ ತಿನ್ನುವ ಅಭ್ಯಾಸ ನಿಮ್ಮದಾಗಿದ್ರೆ ಕಡಿಮೆ ಅಂತರದಲ್ಲಿ ಆಹಾರವನ್ನು ತೆಗೆದುಕೊಳ್ಳದಿರುವುದೇ ಉತ್ತಮ. ಇದು ಜೀರ್ಣಶಕ್ತಿಗೆ ನೆರವಾಗಲು, ಹೆಚ್ಚು ಕ್ಯಾಲೋರಿಯಿಂದ ದೇಹವನ್ನು ಶಕ್ತಗೊಳಿಸುತ್ತದೆ.
 
ವರ್ಕೌಟ್ ಮಾಡುವುದು ಉತ್ತಮವಾದ ಸಲಹೆಗಳಲ್ಲಿ ಒಂದು.. ವರ್ಕೌಟ್ ಜೀರ್ಣಶಕ್ತಿಗೆ ಸಹಾಯಕಾರಿಯಾಗಬಲ್ಲದ್ದು, ನಿಮ್ಮ ದೇಹಕ್ಕೆ ನಿಮ್ಮ ವರ್ಕೌಟ್ ನೀಡಿದ್ರೆ ಹೆಚ್ಚಿನ ಚೀರ್ಣಶಕ್ತಿ ಯಾವುದೇ ಸಂದರ್ಭದಲ್ಲೂ ಹೆಚ್ಚಳವಾಗುತ್ತದೆ. ಆದ್ದರಿಂದ ಹಾರ್ಡ್ ವರ್ಕೌಟ್ ಮಾಡಿದ ಬಳಿಕ ನಾಲ್ಕು ಮೂರು ಅಥವಾ ನಾಲ್ಕು ಬಾರಿ ಆಹಾರ ಸೇವಿಸುವುದು ಉತ್ತಮ.
 
ದಿನದಲ್ಲಿ ಆರರಿಂದ ಎಂಟು ಬಾರಿ ಆಹಾರ ಸೇವಿಸಿದ್ರೆ ನಿಮ್ಮ ಜೀರ್ಣಶಕ್ತಿಗೆ ಉಪಯೋಗಕಾರಿ... ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲನ ಕಾಪಾಡುವಲ್ಲಿ ಹಾಗೂ ತೂಕ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಇನ್ನೂ ನಿತ್ಯವು ಒಂದೇ ಕ್ಯಾಲೋರಿ ಇರುವಂತಹ ಆಹಾರ ಸೇವಿಸಿದ್ರೆ ಇದರಿಂದ ರಕ್ತದೋತ್ತಡ ಹೆಚ್ಚಾಗುವ ಸಾಧ್ಯತೆ ಹೆಚ್ಚು. 
 
 ಮಧುಮೆಹಿಗಳು ದಿನದಲ್ಲಿ ಆರರಿಂದ ಎಂಟು ಬಾರಿ ಊಟ ಸೇವನೆ ಮಾಡಬೇಕು. ಆದ ಕಾರಣ ಬಾಲಿವುಡ್ ನಟರು ಹಾಗೂ ನಟಿಯರು ನಿಯಮಿತವಾಗಿ ಡಯೆಟ್‌ಗೆ ಮೊರೆ ಹೋಗುತ್ತಾರೆ.ಆದ್ದರಿಂದ ಅವರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರಂತೆ.
 
ಆಹಾರದ ಮಧ್ಯದಲ್ಲಿ ತಿಂಡಿ ತಿನ್ನುವುದರಿಂದ ಸಾಮಾನ್ಯವಾಗಿ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ಬರೀ ಊಟವನ್ನೇ ತಿನ್ನುತ್ತಾ ಹೋದ್ರೆ ನಿಮ್ಮ ತೂಕ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಆಹಾರ ತರಬೇತುದಾರರು ತಜ್ಞರು ಅಭಿಪ್ರಾಯಪಡುತ್ತಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

 

ವೆಬ್ದುನಿಯಾವನ್ನು ಓದಿ