ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಿಕೊಳ್ಳಬೇಕೆ…? ಇಲ್ಲಿದೆ ನೋಡಿ ಟಿಪ್ಸ್

ಬುಧವಾರ, 21 ಮಾರ್ಚ್ 2018 (12:23 IST)
ಬೆಂಗಳೂರು: ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಇರುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ದೇಹಕ್ಕೆ ಹಾನಿ ಮಾಡಲ್ಲ. ಆದರೆ ಈ ಕೊಲೆಸ್ಟ್ರಾಲ್ ನಿಂದ ಸಾಕಷ್ಟು ತೊಂದರೆ ಇದೆ. ನಾವು ದಿನನಿತ್ಯ ಸೇವಿಸುವ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.

  
ಮೆಂತೆ
ಯಕೃತ್ತು ಮತ್ತು ಕರುಳಿಗೆ ಬೇಡದ ಅನಗತ್ಯ ಕೊಬ್ಬನ್ನು ಹೀರಿಕೊಂಡು, ಅಗತ್ಯವಿರುವ ಎಚ್‍ಡಿಎಲ್ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ದೇಹಕ್ಕೆ ಬೇಕಾಗುವ ನಾರಿನಂಶವನ್ನು ಒದಗಿಸುತ್ತದೆ.

  
ದಾಲ್ಚಿನ್ನಿ
ಇದು ಎಚ್‍ಡಿಎಲ್, ಟ್ರೈಗ್ಲಿಸರೈಡ್ ಮತ್ತು ಸೆರಮ್ ಗ್ಲೂಕೋಸ್‍ ಅನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.

ಧಾನ್ಯಗಳು
ಧಾನ್ಯಗಳಲ್ಲಿ ನಾರಿನಂಶವು ಸಮೃದ್ಧವಾಗಿರುವುದು. ಇವು ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡಿ, ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತವೆ ಎಂದು ಹೇಳಲಾಗುತ್ತದೆ.

ಡ್ರೈ ಫ್ರೂಟ್ಸ್
ಬಾದಾಮಿ, ಪಿಸ್ತಾ  ಇತರೆ  ಡ್ರೈ ಫ್ರೂಟ್ಸ್ ಗಳಲ್ಲಿ  ಹೆಚ್ಚಿನ ಪ್ರಮಾಣದ ಕೊಬ್ಬಿನಂಶ ಇರುತ್ತದೆ. ಸರಿಯಾದ ರೀತಿಯಲ್ಲಿ ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ನೀಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ