ಕರ್ಪೂರದಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?

ಗುರುವಾರ, 11 ಏಪ್ರಿಲ್ 2019 (09:49 IST)
ಬೆಂಗಳೂರು : ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ಆದರೆ ಈ ಕರ್ಪೂರ ದೇವರ ಪೂಜೆಗೆ ಮಾತ್ರವಲ್ಲ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ.

ಹೌದು. ಕರ್ಪೂರ ಹಾಗೂ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಇದ್ರಿಂದ ಮುಖ ಸ್ವಚ್ಛವಾಗಿ ಕಾಣುತ್ತದೆ. ಬಿಸಿ ನೀರಿಗೆ ಕರ್ಪೂರ ಸೇರಿಸಿ ಇದನ್ನು ಕಾಲಿನ ಹಿಮ್ಮಡಿಗಳಿಗೆ ಹಚ್ಚಿಕೊಳ್ಳುವುದರಿಂದ ಒಡೆದ ಪಾದದ ನೋವು ಕಡಿಮೆಯಾಗುತ್ತದೆ.ಕರ್ಪೂರದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ಬಲಗೊಳ್ಳತ್ತದೆ.

 

100 ಗ್ರಾಂ ತೆಂಗಿನ ಎಣ್ಣೆಗೆ ಚಿಟಕಿ ಕರ್ಪೂರವನ್ನು ಹಾಕಿ ಮಿಕ್ಸ್ ಮಾಡಿ ಸ್ನಾನವಾದ ನಂತ್ರ ಇದನ್ನು ದೇಹಕ್ಕೆ ಹಚ್ಚಿಕೊಳ್ಳಿ. ಚರ್ಮ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಸುಟ್ಟ ಅಥವಾ ಇನ್ನಾವುದೋ ಕಾರಣದಿಂದ ಕೆಲವರ ಚರ್ಮದ ಮೇಲೆ ಕಲೆ ಉಳಿದಿರುತ್ತದೆ. ಕರ್ಪೂರವನ್ನು ನೀರಿನಲ್ಲಿ ಒದ್ದೆ ಮಾಡಿ ಅದನ್ನು ಕಲೆಯ ಜಾಗಕ್ಕೆ ಹಚ್ಚುತ್ತ ಬಂದರೆ ಕಲೆ ಮಾಯವಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ