ಗೃಹಾಲಂಕಾರಕ್ಕೆ ಕೆಲವು ಸಲಹೆಗಳು

ಮಂಗಳವಾರ, 26 ಮಾರ್ಚ್ 2019 (17:37 IST)
ಮಹಿಳೆಯರು ಸೌಂದರ್ಯ ಪ್ರಿಯರೆಂಬುದರ ವಿಷಯ ನಿಮಗೆಲ್ಲಾ ತಿಳಿದಿದೆ. ಅವರಿಗೆ ಪ್ರಿಯವಾದುದು ವಸ್ತ್ರ ಧಾರಣೆ, ಆಭರಣಕ್ಕೆ ಮಾತ್ರವೇ ಸೀಮಿತವಾಗಿಲ್ಲ. ತಮ್ಮ ಮನೆಯನ್ನು ಯಾವಾಗಲೂ ಹೊಸದಾಗಿ, ಅಂದವಾಗಿ ಅಲಂಕರಿಸಲು ಇಷ್ಟಪಡುತ್ತಾರೆ.

ಇದಕ್ಕಾಗಿ ಪ್ರತಿನಿತ್ಯ ಹೊಸ ಹೊಸ ಆಲೋಚನೆಗಳಲ್ಲಿ ತೊಡಗಿರುತ್ತಾರೆ. ಲೀವಿಂಗ್‌ರೂಂ, ಬೆಡ್‌ರೂಂ, ಬಾತ್‌ರೂಂ ಹೀಗೆ ಮನೆಯಲ್ಲಿ ಪ್ರತಿಯೊಂದು ಕೊಠಡಿಗಳು ವಿಶಿಷ್ಟ ರೀತಿಯಲ್ಲಿ ಇರುವಂತೆ ಮಾಡಲು ಏನಾದರೂ ಹೊಸದಾಗಿ ಆಲೋಚನೆ ಮಾಡುತ್ತಿರುತ್ತಾರೆ. ಆದರೆ ಈ ಹೊಸತನಕ್ಕಾಗಿ ಪ್ರತಿಬಾರಿ ಅಂಗಡಿಯಿಂದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.
 
ಉದಾಹರಣೆಗೆ ನಿಮ್ಮ ಮನೆಯಲ್ಲಿನ ಲೀವಿಂಗ್‌ರೂಂನಲ್ಲಿ ಅಲ್ಲಿರುವ ದಿವಾನ್, ಸೋಫಾ ಸ್ಥಳವನ್ನು ಬದಲಾವಣೆ ಮಾಡುವುದರಿಂದ ಹೊಸ ಬದಲಾವಣೆ ಕಂಡುಬರುತ್ತದೆ. ಹೀಗೆ ಮನೆಯಲ್ಲಿರುವ ವಸ್ತುಗಳ ಸ್ಥಳವನ್ನು ಸ್ವಲ್ಪ ಬದಲಾವಣೆ ಮಾಡುವುದರಿಂದ ಹೊಸತನ ಕಂಡುಬರುತ್ತದೆ.
 
ಲೀವಿಂಗ್‌ರೂಂನಲ್ಲಿ ಹೊಸ ಬದಲಾವಣೆಗಳನ್ನು ತರಲು ಸೋಫಾ, ಕುರ್ಚಿಗಳನ್ನು ನಿಮಗೆ ಇಷ್ಟವಾಗುವ ರೀತಿಯಲ್ಲಿ ಜರುಗಿಸಿ ಮಧ್ಯದಲ್ಲಿ ಅಂದವಾದ ಕಾರ್ಪೆಟ್ ಹಾಕಿದಾಗ ಬದಲಾವಣೆ ಕಂಡುಬರುತ್ತದೆ, ಮುಖ್ಯವಾಗಿ ಕೆಂಪು ಕಾರ್ಪೆಟ್ ಹಾಕಿದರೆ ಹೆಚ್ಚು ಆಕರ್ಷಕವಾಗಿರುತ್ತದೆ, ಹೀಗೆ ಅಚ್ಚುಕಟ್ಟಾಗಿ ಇದ್ದಾಗ ನಮ್ಮ ಮನಸ್ಸಿಗೂ ಆರಾಮದಾಯಕವಾಗಿರುತ್ತದೆ. 
 
ಮನೆಯಲ್ಲಿನ ಬಾಗಿಲುಗಳು, ಕಿಟಕಿಗಳಿಗೆ ಹಾಕುವ ಸ್ಕ್ರೀನ್‌ಗಳನ್ನು ಆಗಾಗ ಬದಲಾಯಿಸುತ್ತಿರಬೇಕು. ಅದಕ್ಕಾಗಿ ಪ್ರತಿಬಾರಿಯೂ ಹೊಸದನ್ನು ಖರೀದಿಸಬೇಕೆಂದೇನಿಲ್ಲ, ಒಂದು ಕೊಠಡಿಯ ಸ್ಕ್ರೀನ್ ಅನ್ನು ಮತ್ತೊಂದು ಕೊಠಡಿಗೆ ಹೀಗೆ ಅದಲು ಬದಲು ಮಾಡಿ ಹಾಕುತ್ತಿದ್ದರೆ ಹೊಸತನ ಕಂಡುಬರುತ್ತದೆ. ಗೋಡೆಗಳ ಮೇಲೆ ಹಾಕುವ ಫೋಟೋಗಳನ್ನು ಸಹ ಆಗಾಗ ಬದಲಾಯಿಸುವುದರಿಂದ ಯಾವಾಗಲೂ ಹೊಸತನ ಬೇಕೆನಿಸುವ ನಿಮ್ಮ ಮನಸ್ಸಿಗೆ ಅಹ್ಲಾದಕರವನ್ನು ನೀಡುತ್ತದೆ.
 
ಮನೆಯಲ್ಲಿರುವ ಲೈಟಿಂಗ್ ವ್ಯವಸ್ಥೆಯಲ್ಲೂ ಬದಲಾವಣೆಯನ್ನು ಮಾಡುವುದರಿಂದ ಕೊಠಡಿಗೆ ಹೊಸರೂಪವನ್ನು ತಂದುಕೊಡುತ್ತದೆ. ಮಕ್ಕಳ ರೂಂನಲ್ಲಿ ಬಣ್ಣ ಬಣ್ಣದ ಬಲ್ಬುಗಳು, ಡೈನಿಂಗ್‌ಹಾಲ್‌ನಲ್ಲಿ ಬಲ್ಬುಗಳು, ಹೀಗೆ ನಮ್ಮಲ್ಲಿರುವ ವಸ್ತುಗಳನ್ನು ಅದಲು ಬದಲು ಮಾಡಿ, ಅಚ್ಚುಕಟ್ಟಾಗಿ ಅದನ್ನು ಜೋಡಿಸುವುದರಿಂದ ಹೊಸತನ ಬರುತ್ತದೆ. ಪ್ರತಿಬಾರಿಯೂ ಹೊಸ ವಸ್ತುಗಳನ್ನು ಖರೀದಿ ಮಾಡುವ ಅಗತ್ಯವಿರುವುದಿಲ್ಲ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ