ಯೋನಿಯ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಹೀಗೆ ಮಾಡಿ

ಸೋಮವಾರ, 22 ಜನವರಿ 2018 (07:13 IST)
ಬೆಂಗಳೂರು : ಯೋನಿ ತುಂಬಾ ಸೂಕ್ಷ್ಮವಾದ ಅಂಗ. ಕೆಲವೊಂದು ಸಂದರ್ಭದಲ್ಲಿ ಅದರಲ್ಲಿ ಬಿಳಿಮುಟ್ಟು ರಿಲೀಸ್ ಆಗುವುದರಿಂದ ಅಥವಾ ಬೇರೆ ಯಾವುದೋ ಕಾರಣಗಳಿಂದ ಅದರಿಂದ ಕೆಟ್ಟ ವಾಸನೆ ಬರುತ್ತದೆ. ಅದನ್ನು ಮನೆಮದ್ದಿನಿಂದ ಕೂಡ ನಿವಾರಿಸಬಹುದು..  ಒಂದುವೇಳೆ ಆಗಲೂ ಅದರಿಂದ ಬರುವ ವಾಸನೆ ಕಡಿಮೆಯಾಗಿಲ್ಲವೆಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

 
ಯೋನಿಯ ದುರ್ವಾಸನೆಯನ್ನು ಹೋಗಲಾಡಿಸಲು ಬೇವು ಒಂದು ಪರಿಣಾಮಕಾರಿ ಮದ್ದಾಗಿದೆ. ಕೆಲವು ಬೇವಿನ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದು ತಣ್ಣಗಾದ ಮೇಲೆ ಅದರಿಂದ ಯೋನಿಯನ್ನು ತೊಳೆಯಿರಿ. ಇದಕ್ಕೆ ಬೇವಿನ ಎಣ್ಣೆ ಕೂಡ ಉಪಯೋಗಿಸಬಹುದು. ಬಾತ್ ಟಬ್ ನಲ್ಲಿ ಬೆಚ್ಚಗಿರುವ ನೀರಿಗೆ ½ ಲೋಟ ವೈಟ್ ವಿನೆಗರ್ ಹಾಗು ಉಪ್ಪನ್ನು ಬೆರೆಸಿರಿ. ಅದರಿಂದ ಯೋನಿಯನ್ನು ತೊಳೆಯುವುದರಿಂದ ಅದರಿಂದ ದುರ್ವಾಸನೆ ಬರುವುದಿಲ್ಲ. ಏಕೆಂದರೆ ವೈಟ್ ವಿನೆಗರ್ ಗೆ ಯೋನಿಯ ಪಿಎಚ್ ಮಟ್ಟವನ್ನು ಕಾಯ್ದಿರಿಸುವ ಗುಣವಿದೆ.


ಮೂತ್ರ ವಿಸರ್ಜನೆ ಮಾಡಿದ ಮೇಲೆ ಗುಪ್ತಾಂಗವನ್ನು ಚೆನ್ನಾಗಿ ತೊಳೆದುಕೊಳ್ಳುವುದರಿಂದ ಅದರಿಂದ ಕೆಟ್ಟ ವಾಸನೆ ಬರುವುದಿಲ್ಲ. ಬೆಚ್ಚಗಿನ ನೀರಿಗೆ ಎಫಸಂ ಉಪ್ಪನ್ನು ಸೇರಿಸಿ ಅದರ ಮೇಲೆ 10 ನಿಮಿಷಗಳ ಕಾಲ ಕುಳಿತುಕೊಳ್ಳಬೇಕು. ಇದನ್ನು ದಿನಕ್ಕೆ  2 ಬಾರಿ ಮಾಡಿದರೆ ಯೋನಿಯಿಂದ ಕೆಟ್ಟ ವಾಸನೆ ಬರುವುದಿಲ್ಲ. ಅಡುಗೆ ಸೋಡಾವನ್ನು ಬೆಚ್ಚಗಿನ ನೀರಿಗೆ ಸೇರಿಸಿ ಅದರ ಮೇಲೆ ಕುಳಿತುಕೊಂಡು ನಂತರ ಸ್ವಚ್ಚವಾದ ಟವಲ್ ನಿಂದ ಒರೆಸಿಕೊಳ್ಳುವುದರಿಂದ ಕೂಡ ಯೋನಿಯಲ್ಲಿ ವಾಸನೆ ಬರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ