ಗುಪ್ತಾಂಗದ ತುರಿಕೆ ತಡೆಯಲು ಮಹಿಳೆಯರು ಇದನ್ನು ಮಾಡಲೇಬೇಕು!

ಬುಧವಾರ, 8 ಜುಲೈ 2020 (09:08 IST)
ಬೆಂಗಳೂರು: ಮಹಿಳೆಯರು ಗುಪ್ತಾಂಗದ ಸಮಸ್ಯೆ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಾಗದೇ ತಾವೇ ಒಳಗೊಳಗೇ ಅನುಭವಿಸುತ್ತಿರುತ್ತಾರೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯೆಂದರೆ ಗುಪ್ತಾಂಗದ ತುರಿಕೆ. ಇದನ್ನು ತಡೆಯಬೇಕಾದರೆ ಏನು ಮಾಡಬೇಕು?
 

ಪ್ರೊಬಯೋಟಿಕ್ಸ್ ಅಂಶವಿರುವ ಆಹಾರವನ್ನು ಅಧಿಕ ಸೇವಿಸಬೇಕು. ಇದರಿಂದ ಅದು ಸೋಂಕಿನಂತಹ ರೋಗಗಳನ್ನು ಬಾರದಂತೆ ತಡೆಯುತ್ತದೆ. ಜತೆಗೆ ಸಡಿಲವಾದ, ಕಂಫರ್ಟ್ ಎನಿಸುವ ಒಳ ಉಡುಪುಗಳನ್ನು ಧರಿಸಿ. ಆದಷ್ಟು ಹದ ಬಿಸಿ ನೀರಿನಲ್ಲಿ ಒಳ ಉಡುಪು ತೊಳೆದುಕೊಂಡು ಬಿಸಿಲಿನಲ್ಲಿ ಒಣಗಲು ಬಿಡಿ. ಕೆಲವೊಮ್ಮೆ ಗರ್ಭನಿರೋಧಕ ಗುಳಿಗೆಗಳು, ಔಷಧಿಗಳ ಸೇವನೆಯೂ ತುರಿಕೆಗೆ ಕಾರಣವಾಗಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತವೆನಿಸುವ ಗರ್ಭನಿರೋಧಕ ಬಳಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ