ಮಾವಿನ ಹಣ್ಣಿನ ಮೆಣಸುಕಾಯಿ ಮಾಡುವ ವಿಧಾನ ಇಲ್ಲಿದೆ ನೋಡಿ

ಸೋಮವಾರ, 30 ಜುಲೈ 2018 (16:32 IST)
ಬೆಂಗಳೂರು: ಮನೆಯಲ್ಲಿ ಮಾವಿನ ಹಣ್ಣು ಇದ್ದರೆ ಬಗೆ ಬಗೆಯ ಅಡುಗೆಯನ್ನು ಮಾಡಬಹುದು. ಅದರಲ್ಲೂ ಮಾವಿನ ಹಣ್ಣಿನ ಮೆಣಸು ಕಾಯಿ ಮಾಡಿದರೆ ಬಾಯಿ ಚಪ್ಪರಿಸಿಕೊಂಡು ತಿನ್ನಬಹುದು. ಇಲ್ಲಿದೆ ನೋಡಿ ಮಾಡುವ ವಿಧಾನ.

ಬೇಕಾಗುವ ಸಾಮಾಗ್ರಿ
ಕಾಡು ಮಾವಿನ ಹಣ್ಣು : 8
ಬೆಲ್ಲ: ಎರಡು ಲಿಂಬೆ ಹಣ್ಣಿನ ಗಾತ್ರ
ಹಸಿ ಮೆಣಸು ; ೨
ತೆಂಗಿನ ತುರಿ: ಒಂದು ಲೋಟ
ಉಪ್ಪು :ರುಚಿಗೆ ತಕ್ಕಷ್ಟು

ಮಸಾಲೆಗೆ:
ಕೆಂಪು ಮೆಣಸು: ೪
ಉದ್ದು : ೧ ಚಮಚ
ಕಡ್ಲೆ ಬೇಳೆ: ೧ ಚಮಚ
ಮೆಂತೆ: ಕಾಲು ಚಮಚ
ಕೊತ್ತಂಬರಿ ಕಾಳು :೧ ಚಮಚ
ಇಂಗು: ಚಿಟಿಕೆ
ಎಣ್ಣೆ :ಒಂದು ಚಮಚ

ಒಗ್ಗರಣೆಗೆ:
ಎಣ್ಣೆ : ಒಂದು ಚಮಚ
ಸಾಸಿವೆ: ಕಾಲು ಚಮಚ
ಕೆಂಪು ಮೆಣಸು :೧
ಕರಿಬೇವಿನೆಲೆ ಎಸಳು : ೧೦


ವಿಧಾನ :

ಒಗ್ಗರಣೆ ಸೌಟಿನಲ್ಲಿ ಎಣ್ಣೆ ಹಾಕಿ, ಕೆಂಪು ಮೆಣಸು,ಕಡ್ಲೆ ಬೇಳೆ,ಉದ್ದು,ಮೆಂತೆ,ಕೊತ್ತಂಬರಿ ಕಾಳು ಇವುಗಳನ್ನು ಹುರಿಯಿರಿ.ಇದಕ್ಕೆ ಇಂಗು,ಅರಸಿನ,ಕರಿಬೇವಿನೆಲೆ ಸೇರಿಸಿ ಮತ್ತೊಂದು ನಿಮಿಷ ಹುರಿಯಿರಿ.
ಮೇಲೆ ಹೇಳಿದ ಹುರಿದ ಸಾಮಗ್ರಿಗಳನ್ನು ತೆಂಗಿನ ತುರಿಯ ಜತೆ ನೀರು ಹಾಕಿ ಚೆನ್ನಾಗಿ ರುಬ್ಬಿ.
ಕಾಡು ಮಾವಿನ ಹಣ್ಣಿನ ಸಿಪ್ಪೆ ತೆಗೆಯಿರಿ.ಸಿಪ್ಪೆಯನ್ನು ಹಿಂಡಿ ರಸ ತೆಗೆಯಿರಿ. ಗೊರಟು ಮತ್ತು ಸಿಪ್ಪೆಯ ರಸ ಇದಕ್ಕೆ ಅರ್ಧ ಲೋಟ ನೀರು ಹಾಕಿ ಬೇಯಿಸಿ. ಇದಕ್ಕೆ ಹಸಿ ಮೆಣಸು,ಬೆಲ್ಲ, ಉಪ್ಪು ಸೇರಿಸಿ ಮತ್ತಷ್ಟು ಹೊತ್ತು ಬೇಯಿಸಿ.ಇದಕ್ಕೆ ರುಬ್ಬಿಟ್ಟ ಮಸಾಲೆಯನ್ನು ಸೇರಿಸಿ. ಮಂದ ಉರಿಯಲ್ಲಿ ೫ ನಿಮಿಷಗಳ ಕಾಲ ಬೇಯಿಸಿ..ಒಗ್ಗರಣೆ ಸೌಟಿನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಕೆಂಪು ಮೆಣಸು ಹಾಕಿ. ಸಾಸಿವೆ ಚಟಪಟ ಎನ್ನುತ್ತಿದ್ದಂತೆ ಕರಿಬೇವಿನ ಎಸಳು ಹಾಕಿ,ಒಗ್ಗರಣೆ ತಯಾರಿಸಿ. ಇದನ್ನು ಬೇಯುತ್ತಿರುವ ಮಾವಿನ ಮಿಶ್ರಣಕ್ಕೆ ಹಾಕಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ