ಕೂದಲು ಕವಲು ಒಡೆಯುವುದನ್ನು ತಡೆಯಬೇಕಾ...? ಇಲ್ಲಿದೆ ನೋಡಿ ಮನೆಮದ್ದು

ಶುಕ್ರವಾರ, 19 ಜನವರಿ 2018 (08:04 IST)
ಬೆಂಗಳೂರು : ಹೆಚ್ಚಿನವರ ಕೂದಲು ತುದಿಯಲ್ಲಿ ಕವಲು ಒಡೆದಿರುವುದನ್ನು ಗಮನಿಸಿರಬಹುದು. ಕೂದಲು ಈ ರೀತಿಯಾಗಿ ಕವಲೊಡೆದಾಗ ಅದು ಮತ್ತೆ ಬೆಳೆಯುವುದಿಲ್ಲ. ಇದರಿಂದ ಕೂದಲು ಉದ್ದವಾಗಿ ಬೆಳೆಯಬೇಕು ಎಂದು ಹಂಬಲಿಸುವವರ ಆಸೆ ಈಡೇರುವುದಿಲ್ಲ.ಕೂದಲು ಕವಲೊಡೆಯುವುದನ್ನು ತಡೆಯಲು ಒಂದು ಎಣ್ಣೆ ಇದೆ. ಅದನ್ನು ಹಚ್ಚಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.

 
ಆ ಎಣ್ಣೆ ಯಾವುದೆಂದರೆ ಸಾಸಿವೆ ಎಣ್ಣೆ. ಇದನ್ನು ಬಳಸುವುದರಿಂದ ಕೂದಲು ಕವಲೊಡೆಯುವುದಿಲ್ಲ. ಅದನ್ನು ಹೇಗೆ ಬಳಸಬೇಕೆಂದರೆ 4 ಚಮಚ ಸಾಸಿವೆ ಎಣ್ಣೆ, 1 ಚಮಚ ಮೆಂತ್ಯ ಪುಡಿ ಎರಡನ್ನು ಮಿಕ್ಸ್ ಮಾಡಿ ಬಿಸಿ ಮಾಡಿ (ಕುದಿಸಬಾರದು) ನಂತರ ಅದನ್ನು ಒಂದು ಗ್ಲಾಸ್ ನಲ್ಲಿ ಸ್ಟೋರ್ ಮಾಡಿ ಇಡಿ. ಈ ಎಣ್ಣೆಯನ್ನು  ಕೂದಲಿಗೆ ಹಚ್ಚುವಾಗ ಸ್ವಲ್ಪ ಬಿಸಿ ಮಾಡಿ ಹಚ್ಚಿ  ಚೆನ್ನಾಗಿ ಮಸಾಜ್ ಮಾಡಿ.  ನಂತರ 1 ಗಂಟೆ ಬಿಟ್ಟು ಸ್ನಾನ ಮಾಡಿ. ಕೂದಲಿಗೆ ಹರ್ಬಲ್ ಶಾಂಪೂವನ್ನೇ ಯಾವಾಗಲೂ ಬಳಸಿ. ಇದರಿಂದ ಕೂದಲು ಕವಲೊಡೆಯುವುದು ನಿವಾರಣೆಯಾಗುವುದರ ಜೊತೆಗೆ ತಲೆಹೊಟ್ಟು ಹಾಗು ಕೂದಲು ಬೆಳ್ಳಗಾಗುವ ಸಮಸ್ಯೆಯು ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ