ಬೆಂಗಳೂರು: ಇಂದಿನಿಂದ ಹಸಿರು, ಆರೆಂಜ್ ವಲಯಗಳಲ್ಲಿ ಖಾಸಗಿ, ಸರಕಾರಿ ಕಚೇರಿಗಳನ್ನು ತೆರೆಯಲು ಅವಕಾಶ ನೀಡಿದರೂ ನೌಕರರು ಕಚೇರಿಗೆ ಬರಲು ಹಿಂದೇಟು ಹಾಕುವಂತಾಗಿದೆ.
ಕೆಲವು ಕಂಪನಿಗಳು ಮಾತ್ರವೇ ನೌಕರರಿಗೆ ಪಾಸ್, ವಾಹನ ಸೌಕರ್ಯ ಇತ್ಯಾದಿ ಒದಗಿಸುತ್ತಿವೆ. ಹೀಗಾಗಿ ಈ ಕಂಪನಿ ನೌಕರರು ಆರಾಮವಾಗಿ ನೌಕರಿಗೆ ಹಾಜರಾಗಲಿದ್ದಾರೆ.
ಆದರೆ ಕೆಲವು ಕಂಪನಿಗಳಲ್ಲಿ ಪಾಸ್ ವ್ಯವಸ್ಥೆಯಾಗಲೀ, ಸಾರಿಗೆ ವ್ಯವಸ್ಥೆಯಾಗಲೀ ಮಾಡಿಲ್ಲ. ಹೀಗಾಗಿ ಇಂತಹ ಕಂಪನಿಗಳ ನೌಕರರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತಮ್ಮದೇ ವಾಹನಗಳಲ್ಲಿ ಬರುವಾಗ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಅಲ್ಲದೆ, ಇದುವರೆಗೆ ಮನೆಯೊಳಗೇ ಇದ್ದವರು ಈಗ ಇದ್ದಕ್ಕಿದ್ದಂತೆ ಹೊರಗೆ ಬರುವುದು ಸುರಕ್ಷಿತವೇ ಎಂದು ಯೋಚಿಸುವಂತಾಗಿದೆ. ಹೀಗಾಗಿ ಕಚೇರಿ ತೆರೆದರೂ ನೌಕರರು ಹಾಜರಾಗಲು ಹಿಂದೇಟು ಹಾಕುವಂತಾಗಿದೆ.