ಬೆಂಗಳೂರು : ನನಗೆ 47 ವರ್ಷ. ನನ್ನ ಪತ್ನಿಗೆ 41 ವರ್ಷ. ನಾವು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾನು ಯಾವಾಗಲೂ ಆಕೆಯನ್ನು ಮುದ್ದಾಡಲು, ಚುಂಬಿಸಲು, ತಬ್ಬಿಕೊಳ್ಳಲು ಹೀಗೆ ಸರಳ ಕ್ರಿಯೆಗಳ ಮೂಲಕ ನನ್ನ ಪ್ರೀತಿಯನ್ನು ತೋರಿಸಿದರೆ ಆಕೆ ಏನು ಪ್ರತಿಕ್ರಿಯೆ ನೀಡುವುದಿಲ್ಲ. ಹಾಗೇ ಪ್ರೀತಿ ಯಾವಾಗಲೂ ಭೌತಿಕವಲ್ಲ ಎಂದು ಹೇಳುತ್ತಿರುತ್ತಾಳೆ. ಇದರಿಂದ ನನಗೆ ನಿರಾಶೆಯಾಗುತ್ತಿದೆ. ಈ ರೀತಿ ಮಾಡಿ ನಾನು ಏನಾದರೂ ತಪ್ಪುಮಾಡಿದ್ದೇನೆ?
ಉತ್ತರ: ನಿಮ್ಮ ಹೆಂಡತಿ ತುಂಬಾ ಶಾಂತಳಾಗಿರುವಾಗ ಆಕೆಯ ಜೊತೆ ಕುಳಿತು ಮಾತನಾಡಿ. ನೀವು ಯಾವ ರೀತಿ ಇದ್ದರೆ ಅವಳಿಗೆ ಹೆಚ್ಚು ಇಷ್ಟವಾಗುತ್ತದೆ ಎಂದುದನ್ನು ತುಂಬಾ ಪ್ರೀತಿಯಿಂದ ವಿಚಾರಿಸಿ. ಆಕೆಯ ಇಷ್ಟದಂತೆ ನಿಮ್ಮ ಕ್ರಿಯೆಗಳನ್ನು ಮಾರ್ಪಡಿಲು ಪ್ರಯತ್ನಿಸಿ.