ಧೂಳಿನಿಂದ ಗಂಟಲಿನಲ್ಲಿ ಕಿರಿಕಿರಿ ಉಂಟಾಗಿದ್ದರೆ ಇದನ್ನು ಸೇವಿಸಿ

ಶನಿವಾರ, 10 ಆಗಸ್ಟ್ 2019 (08:51 IST)
ಬೆಂಗಳೂರು : ಸಾಮಾನ್ಯವಾಗಿ ಹೊರಗಡೆ ಹೋದಾಗ ಧೂಳಿನಿಂದ ಗಂಟಲಿನಲ್ಲಿ ಕಿರಿಕಿರಿ ಉಂಟಾಗುತ್ತದೆ. ಈ ಗಂಟಲ ಕಿರಿಕಿರಿ ನಿವಾರಿಸಿಕೊಳ್ಳದಿದ್ದರೆ ಅದರಿಂದ ಗಂಟಲು ಇನ್ ಫೆಕ್ಷನ್ ಆಗಬಹುದು. ಆದ್ದರಿಂದ ಈ ಗಂಟಲ ಕಿರಿಕಿರಿ ತಕ್ಷಣ ನಿವಾರಿಸಿಕೊಳ್ಳಲು ಈ ವಿಧಾನ ಅನುಸರಿಸಿ.




ಟೀ ಯಲ್ಲಿ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ. ಅಥವಾ ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿಯುತ್ತಾ ಇರಿ. ಜಗಿದ ಬಳಿಕ ಇದನ್ನು ನುಂಗಿ. ಗಂಟಲು ಕಿರಿಕಿರಿ ನಿವಾರಣೆಗೆ ಇದು ಉತ್ತಮ.


ಒಂದು ಲೀಟರ್‌ ನೀರಿಗೆ 2 ಮೆಂತೆಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ಉರಿ ಆರಿಸಿ ನೀರನ್ನು ಹಾಗೇ ತಣಿಯಲು ಬಿಡಿ. ಈ ನೀರಿನಿಂದ ಬಾಯಿಯನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಗಂಟಲಿನಲ್ಲಿ ಗಳಗಳ ಮಾಡಿ ಮುಕ್ಕಳಿಸುತ್ತಿರಿ. ಹೀಗೆ ಮಾಡಿದರೆ ಗಂಟಲ ಕಿರಿಕಿರಿ, ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ