ಮಕ್ಕಳಿಗೆ ಚಿಕ್ಕ ಗಾಯಗಳಾದಾಗ ಅಥವಾ ಜೇನು ನೊಣ ಕಚ್ಚಿದರೆ ಅಥವಾ ಯಾವುದಾದರೂ ಕೀಟ, ಚೇಳುಗಳು ಕಚ್ಚಿದ್ದಾಗ ಬಾಳೆ ಎಲೆಯ ರಸ ಹಾಕಿದರೆ ಬಹು ಬೇಗ ಗುಣವಾಗುತ್ತದೆ. ಒಂದು ಐಸ್ ಕ್ಯೂಬ್ ತೆಗೆದಕೊಂಡು ಅದನ್ನು ಬಾಳೆಯಲ್ಲಿ ಸುತ್ತಿ, ಅದರಿಂದ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು. ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.
ಅಲ್ಲದೇ ಕೂದಲಿನ ಸಮಸ್ಯೆಗಳಾದ ತಲೆ ಹೊಟ್ಟಿಗೆ ಕುಡಿ ಬಾಳೆ ಎಳೆಗಳ ಪೇಸ್ಟ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ ಹಾಗು ಈ ಪಾಸ್ಟ್ ಅನ್ನು ಬಿಸಿಲಿಗೆ ಟಾನ್ ಆದ ನಿಮ್ಮ ಮುಖ ಅಥವಾ ಕೈ ಕಾಲಿನ ಚರ್ಮಕ್ಕೂ ಲೇಪನ ಮಾಡಿದರೆ ಟಾನ್ ನಿವಾರಣೆ ಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.