ಬಿಸಿಲಿನಿಂದ ಕುತ್ತಿಗೆ ಕಪ್ಪಾಗಿದ್ದರೆ ಈ ಪ್ಯಾಕ್ ಹಚ್ಚಿ

ಶುಕ್ರವಾರ, 3 ಏಪ್ರಿಲ್ 2020 (08:19 IST)
ಬೆಂಗಳೂರು :ಬೇಸಿಗೆ ಕಾಲದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಬಿಸಿಲಿನಲ್ಲಿ ಕೆಲಸ ಮಾಡಿದರೆ ಕುತ್ತಿಗೆ ಭಾಗ ಕಪ್ಪಾಗುತ್ತದೆ. ಈ ಕಲೆಯನ್ನು ಹೋಗಲಾಡಿಸಲು ಈ ಪ್ಯಾಕ್ ಹಚ್ಚಿ.

2 ಚಮಚ ಅಕ್ಕಿ ಹಿಟ್ಟು, ¼ ಚಮಚ ಅರಶಿನ ಪುಡಿ, ಸ್ವಲ್ಪಹಾಲನ್ನು ಮಿಕ್ಸ್ , ½ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಕುತ್ತಿಗೆಯ ಮೇಲೆ ಬಿಸಿ ಬಟ್ಟೆಯನ್ನು  5 ನಿಮಿಷ ಇಟ್ಟುಕೊಳ್ಳಿ. ಬಳಿಕ ನಿಂಬೆ ಹಣ್ಣಿನ ಸಿಪ್ಪೆಯಿಂದ  ಆ ಪ್ಯಾಕ್ ನ್ನು ತೆಗೆದುಕೊಂಡು 5 ನಿಮಿಷ ಸ್ಕ್ರಬ್ ಮಾಡಿಕೊಳ್ಳಿ. ಬಳಿಕ ಅದನ್ನು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಹೀಗೆ ವಾರದಲ್ಲಿ 2 ಬಾರಿ ಮಾಡುತ್ತಾ ಬಂದರೆ ಬಿಸಿಲಿನಿಂದಾದ ಕಪ್ಪು ಕಲೆ ಮಾಯವಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ