ಸಬ್ಬಸಿಗೆ ಸೊಪ್ಪು ಸೇವಿಸಿದರೆ ಈ ಖಾಯಿಲೆಗಳೆಲ್ಲಾ ದೂರವಾಗುತ್ತಂತೆ!

ಬುಧವಾರ, 14 ಮಾರ್ಚ್ 2018 (11:13 IST)
ಬೆಂಗಳೂರು: ಸಬ್ಬಸಿಗೆ  ಸೊಪ್ಪು ಆರೋಗ್ಯಕ್ಕೆ ತುಂಬ ಒಳ್ಳೆಯದು. ಇದನ್ನು ಸೇವಿಸುವುದರಿಂದ ಕೆಲವು ರೋಗಗಳಿಂದಲೂ ದೂರ ಇರಬಹುದಂತೆ. ಯಾವ ಯಾವ ರೋಗಗಳನ್ನು ನಿವಾರಿಸಲು ಇದು ಉಪಯುಕ್ತ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


1.ಎದೆಹಾಲು ಕಡಿಮೆ ಇದ್ದರೆ, ಸಬ್ಬಸಿಗೆ ಸೊಪ್ಪಿನ ಸಾರು ಅಥವಾ ಸೂಪ್ ಕುಡಿದರೆ ಎದೆ ಹಾಲು ಹೆಚ್ಚಾಗುತ್ತದೆಯಂತೆ.

2. ಸಬ್ಬಸಿಗೆ ಸೊಪ್ಪಿನರಸಕ್ಕೆ ಜೇನು ಬೇರಸಿ ಕುಡಿದರೆ ಅಜೀರ್ಣ, ಕಡಿಮೆಯಾಗುತ್ತದೆ. ಹೊಟ್ಟೆನೋವು ಕಡಿಮೆಯಾಗುತ್ತದೆ.

3.ಸಬ್ಬಸಿಗೆ ಸೊಪ್ಪು ನರಗಳಿಗೆ ಶಕ್ತಿಯನ್ನು ನೀಡುತ್ತದೆ, ನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪು ಬಳಸಿದರೆ ನಿದ್ರೆಯ ಸಮಸ್ಯೆ ಕಾಡುವುದಿಲ್ಲ.

4 ಅರಿಶಿನದ ಜೊತೆಗೆ ಸಬ್ಬಸಿಗೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಗಾಯದ ಊತ, ನೋವು ಕಡಿಮೆಯಾಗುತ್ತದೆ.

5.. ಸಬ್ಬಸಿಗೆ ಸೊಪ್ಪುನ್ನು ನುಣ್ಣಗೆ ಅರೆದು ಚರ್ಮದ ಅಲರ್ಜಿ ಇದ್ದ ಜಾಗಕ್ಕೆ ಲೇಪಿಸಿ. ಅಲರ್ಜಿ ನಿವಾರಣೆ ಆಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ