ನಾವು ಪ್ರತಿನಿತ್ಯ ಬಳಸುವ ವಸ್ತುವೊಂದರಲ್ಲಿ ಅಡಗಿದೆಯಂತೆ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವಂತಹ ಗುಣ

ಶುಕ್ರವಾರ, 17 ಮೇ 2019 (06:50 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಗರ್ಭಕೋಶದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಈ ಬಗ್ಗೆ ಸಂಶೋಧನೆ ನಡೆಸಿದ ಸಂಶೋಧಕರು ನಾವು ಪ್ರತಿನಿತ್ಯ ಬಳಸುವ ವಸ್ತುವೊಂದರಲ್ಲಿ ಕ್ಯಾನ್ಸರ್ ಪ್ರಮಾಣವನ್ನು ತಡೆಗಟ್ಟುವಂತಹ ಅಂಶವಿದೆ ಎಂಬುದನ್ನು ಕಂಡುಕೊಂಡಿದ್ದಾರೆ.



ಹೌದು, ಜಪಾನಿನ ಕುಮಾಮೊಟೋ ವಿಶ್ವಸಿದ್ಯಾಲಯದ ಸಂಶೋಧಕರು ಈರುಳ್ಳಿ ಸೇವನೆಯು ಅಂಡಾಶಯದ ಕ್ಯಾನ್ಸರ್ ನಿವಾರಿಸುತ್ತದೆ ಎಂದು ಸಂಶೋಧನೆ ಮಾಡಿ ವರಧಿ ಸಲ್ಲಿಸಿದ್ದಾರೆ.

 

ಬಹುತೇಕ ರೋಗಿಗಳು ಕ್ಯಾನ್ಸರ್ ಆರಂಭದಲ್ಲಿ ಕಿಮೋತೆರಪಿ ಪಡೆದುಕೊಳ್ಳುತ್ತಾರೆ. ಆದರೆ ಅದು ಮತ್ತೆ ಮರುಕಳಿಸುವ ಸಾದ್ಯತೆಹೆಚ್ಚಿದೆ. ಆದರೆ ಈರುಳ್ಳಿ ಸೇವನೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಂಡಾಶಯದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ತಡೆಯುತ್ತದೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ