ಡಯಟ್ ವೇಳೆ ಇವುಗಳನ್ನು ಹೆಚ್ಚಾಗಿ ತಿಂದರೆ ಆರೋಗ್ಯ ಕೆಡುವುದು ಖಂಡಿತ
ಶುಕ್ರವಾರ, 11 ಅಕ್ಟೋಬರ್ 2019 (09:11 IST)
ಬೆಂಗಳೂರು : ಯುವಕ ಯುವತಿಯರು ತಮ್ಮ ದೇಹ ಸೌಂದರ್ಯವನ್ನು ಕಾಪಾಡಲು ಡಯಟ್ ಮೋರೆ ಹೋಗುತ್ತಾರೆ. ಆದರೆ ಇದರಿಂದ ಅವರ ಜೀವಕ್ಕೆ ಆಪತ್ತು ಎದುರಾಗುವ ಸಂಭವವಿರುತ್ತದೆ.
ಹೌದು. ಡಯಟ್ ಸಿಗರೇಟ್ ಸೇದುವುದಕ್ಕಿಂತಲೂ ಅಪಾಯಕಾರಿ ಎನ್ನುತ್ತದೆ ಒಂದು ಅಧ್ಯಯನ. ದಿ ಲೆನ್ಸೆಟ್ ಎಂಬ ಅಂತಾರಾಷ್ಟ್ರೀಯ ವೈದ್ಯಕೀಯ ನಿಯತಕಾಲಿಯೊಂದರಲ್ಲಿ ಪ್ರಕಟವಾಗಿರುವ ಸಮೀಕ್ಷೆಯಲ್ಲಿ 195 ದೇಶಗಳ 25 ವರ್ಷದೊಳಗಿನ ಯುವಕ-ಯುವತಿಯರನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು.ನಾವು ಏನು ತಿನ್ನಬೇಕು ಅಥವಾ ನಮ್ಮ ದೇಹಕ್ಕೆ ಏನು ಬೇಕೆಂಬುದೇ ತಿಳಿಯದ ಜನರು ಸರಿಯಾದ ಡಯಟ್ ಅನುಕರಣ ಮಾಡದಿರುವುದರಿಂದ 2017ರಲ್ಲಿ 25 ವರ್ಷದೊಳಗಿನ 10.9 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ ಎನ್ನುತ್ತದೆ ಅಧ್ಯಯನ.
ರೆಡ್ ಮೀಟ್, ಸಕ್ಕರೆ ಅಂಶ ಹೆಚ್ಚಿರುವ ತಿಂಡಿಗಳು, ಆ್ಯಸಿಡ್ ಅಂಶ ಹೆಚ್ಚಾಗಿರುವ ಪದಾರ್ಥಗಳ ಬಳಕೆ ಆದಷ್ಟೂ ಮಿತವಿದ್ದಷ್ಟೂ ಒಳ್ಳೆಯದು. ಅತಿಯಾದ ಸೋಡಿಯಂ ಅಂಶ ಇರುವ ಪದಾರ್ಥಗಳ ಬಳಕೆ, ಹಣ್ಣುಗಳನ್ನು ಹೆಚ್ಚು ಸೇವಿಸದಿರುವುದು, ಧಾನ್ಯಗಳ ಕಡಿಮೆ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.