ಮನೆಯಲ್ಲಿಯೇ ನ್ಯಾಚುರಲ್ ಆಗಿ ಕೂದಲನ್ನು ಸ್ಟ್ರೇಟನಿಂಗ್ ಮಾಡಿಸಿಕೊಳ್ಳುವುದು ಹೇಗೆ ಗೊತ್ತಾ?

ಸೋಮವಾರ, 22 ಏಪ್ರಿಲ್ 2019 (05:02 IST)
ಬೆಂಗಳೂರು : ಕೆಲವರು ಕೂದಲು ಸ್ಟ್ರೇಟನಿಂಗ್ ಮಾಡಿಸಿಕೊಳ್ಳಲು ಪಾರ್ಲರಿಗೆ ಹೋಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಈ ರೀತಿ ಕೆಮಿಕಲ್ ಯುಕ್ತ ಕ್ರೀಂಗಳಿಂದ ಕೂದಲು ಹಾಳಾಗುತ್ತದೆ. ಅದರ ಬದಲು ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ನಿಮ್ಮ ಕೂದಲು ನೇರವಾಗಿಸಬಹುದು.


ಮೊದಲಿಗೆ ಹಣ್ಣಾದ 2 ಬಾಳೆಹಣ್ಣನ್ನು ಸ್ವಲ್ಪವೂ ಗಂಟುಗಳಿಲ್ಲದಂತೆ ನಾದಿಕೊಳ್ಳಬೇಕು. ನಂತರ ಅದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಬೇಕು. ಎಲ್ಲ ಮಿಶ್ರಣಗಳೂ ಸರಿಯಾಗಿ ಬೆರೆತ ನಂತರ ಅದನ್ನು ಕೂದಲಿಗೆ ಹಚ್ಚಬೇಕು.
ಬಾಳೆಹಣ್ಣಿನ ಮಿಶ್ರಣವನ್ನು ಕೂದಲಿಗೆ ಹಚ್ಚಿದ ನಂತರ ಸುಮಾರು 1 ಗಂಟೆಗಳ ತನಕ ಅದನ್ನು ಹಾಗೆ ಬಿಡಿ. ನಂತರ ಹರ್ಬಲ್ ಶಾಂಪೂವಿನಿಂದ ಕೂದಲನ್ನು ತೊಳೆಯಬಹುದು. ಹೀಗೆ ಮಾಡುವುದರಿಂದ ಕೂದಲು ನೇರವಾಗುತ್ತದೆ ಮತ್ತು ಹೊಳಪನ್ನು ಪಡೆಯುತ್ತದೆ. ಇದರಿಂದ ಕೂದಲಿಗೆ ಯಾವುದೇ ರೀತಿಯ ಹಾನಿ ಕೂಡ ಉಂಟಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ