ಸೀರೆಯಿಂದ ನಿಮ್ಮ ಅಂದ ಹೆಚ್ಚಾಗಬೇಕೆಂದರೆ ಸೀರೆಗಳ ಆಯ್ಕೆ ಹೀಗಿರಲಿ

ಭಾನುವಾರ, 11 ಆಗಸ್ಟ್ 2019 (07:49 IST)
ಬೆಂಗಳೂರು : ಮಹಿಳೆಯರಿಗೆ ಸೀರೆ ಬಹಳ ಇಷ್ಟ ಮಾತ್ರವಲ್ಲ ಅದು ಅವರ  ಅಂದವನ್ನು ಹೆಚ್ಚಿಸುತ್ತದೆ. ಹಾಗೇ ಮಹಿಳೆಯರು ತಮ್ಮ ಮೈಬಣ್ಣಕ್ಕೆ ತಕ್ಕಂತೆ ಸೀರೆಗಳನ್ನು ಧರಿಸಿದರೆ ಅವರ  ಅಂದ ಮತ್ತಷ್ಟು ಇಮ್ಮುಡಿಗೊಳ್ಳುತ್ತದೆ.
ಕಪ್ಪು ವರ್ಣದವರು ತಿಳಿ ಬಣ್ಣದ ಸೀರೆಗಳನ್ನು ಧರಿಸಿದರೆ ಉತ್ತಮ. ಉದಾಹರಣೆಗೆ ಬಾದಾಮಿ, ತಿಳಿ ನೀಲಿ, ನಸು ಹಸಿರು, ನಸು ಗುಲಾಬಿ, ಗುಲಾಬಿ ಆನಂದ, ನಸು ಮೆಂಜತಾ, ಕನಕಾಂಬರ, ನಸು ಹಳದಿ ಮತ್ತು ಬಿಳಿಯ ಬಣ್ಣದ ಹಾಗೂ ಚಿಕ್ಕ-ಚಿಕ್ಕ ಹೂಗಳಿರುವ ಸೀರೆ ಆಯ್ದುಕೊಳ್ಳುವುದು ಉತ್ತಮ.


ಎಣ್ಣೆಗಪ್ಪು ಅಥವಾ ಕಪ್ಪು ಮಿಶ್ರಿತ ಕೆಂಪು ಬಣ್ಣದವರು ಬೂದು ಬಣ್ಣ, ಕೋಕೋ ಬಣ್ಣ, ಆಕಾಶ ನೀಲಿ, ಈರುಳ್ಳಿ ಬಣ್ಣದ ಸೀರೆಗಳನ್ನು ಬಳಸಬಹುದು. ಈ ಬಣ್ಣದವರಿಗೆ ಈ ಮೇಲಿನ ಬಣ್ಣಗಳಲ್ಲಿ ದೊಡ್ಡ-ದೊಡ್ಡ ಹೂಗಳಿರುವ ಸೀರೆಯೂ ಒಪ್ಪುತ್ತದೆ.


ಬಿಳಿ ಬಣ್ಣದವರು ಗಾಢವಾದ ಬಣ್ಣಗಳ ಸೀರೆಗಳನ್ನು ಧರಿಸಿದರೆ ಉತ್ತಮ. ಉದಾಹರಣೆಗೆ ಕಡುನೀಲಿ, ಕಡು ಹಸಿರು, ಟೊಮೆಟೊ ಕೆಂಪು, ಕಪ್ಪು, ಗಾಢವಾದ ನೇರಳೆ, ಬಂಗಾರದ ಕಲರ್ ಸೀರೆ ಬಳಸಬಹುದು. ಆದರೆ ಬಿಳಿಯ ಬಣ್ಣದವರು ಬಿಳಿಯ ಬಣ್ಣದ ಸೀರೆಯನ್ನೇ ಬಳಸುವುದು ಅಷ್ಟೊಂದು ಶೋಭಿಸುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ