ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದ ಹಾಗೆ ಆಗಿದ್ದರೆ ಇದನ್ನು ಸೇವಿಸಿ
ಬುಧವಾರ, 7 ಆಗಸ್ಟ್ 2019 (09:11 IST)
ಬೆಂಗಳೂರು : ತುಂಬಾ ಹಸಿವಾದಾಗ ಎಲ್ಲವನ್ನು ತಿನ್ನಬೇಕೆನಿಸುತ್ತದೆ. ಯಾವುದೇ ಆಹಾರವನ್ನು ಮಿತವಾಗಿ ತಿನ್ನಬೇಕು. ಒಂದು ವೇಳೆ ಅತಿಯಾಗಿ ತಿಂದರೆ ಅಜೀರ್ಣದ ಸಮಸ್ಯೆ ಕಾಡುತ್ತದೆ. ಇದರಿಂದ ಹೊಟ್ಟೆ ನೋವು ಕೂಡ ಕಾಡಬಹುದು. ಈ ಅಜೀರ್ಣವನ್ನು ನಿವಾರಿಸಲು ಇಲ್ಲಿದೆ ಮನೆಮದ್ದು.
ಊಟವಾದ ಬಳಿಕ ಸ್ವಲ್ಪ ಸೊಂಪು ಅಥವಾ ಜೀರಿಗೆಯನ್ನು ಜಗಿದರೆ ಅಜೀರ್ಣಕ್ಕೆ ಒಳ್ಳೆಯದು. ಇವುಗಳನ್ನುತಿನ್ನುವುದರಿಂದ ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹಾಗೇ ಸೊಂಪು ಅಥವಾ ಜೀರಿಗೆ ಕಷಾಯ ಕೂಡ ಮಾಡಿ ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ.
ನಿಂಬೆರಸಕ್ಕೆ ಅಡುಗೆ ಸೋಡಾ ಮತ್ತು ಉಪ್ಪು ಬೆರೆಸಿ ಕುಡಿಯುವುದರಿಂದ ಅಜೀರ್ಣವನ್ನು ಕಡಿಮೆ ಮಾಡಬಹುದು. ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದ ಹಾಗೆ ಆದರೆ ಕೊತ್ತಂಬರಿ ಬೀಜವನ್ನು ಪುಡಿ ಮಾಡಿ ನೀರಿಗೆ ಹಾಕಿ ಕುಡಿದರೆ ಒಳ್ಳೆಯದು. ಒಂದು ಚಿಟಿಕೆ ಉಪ್ಪು ಮತ್ತು ಒಂದು ಚಮಚ ಶುಂಠಿ ರಸವನ್ನು ಸೇರಿಸಿ ಊಟಕ್ಕೆ ಸ್ವಲ್ಪ ಮುಂಚೆ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.