ಟೈಪಡ್ ಜ್ವರ ಬೇಗ ವಾಸಿಯಾಗಲು ಈ ವಿಧಾನ ಅನುಸರಿಸಿ

ಗುರುವಾರ, 25 ಜನವರಿ 2018 (06:45 IST)
ಬೆಂಗಳೂರು : ಟೈಪಡ್ ಜ್ವರ ಇತ್ತಿಚೆಗೆ ಎಲ್ಲರಿಗೂ ಬರುತ್ತಾ ಇದೆ. ಇದರಿಂದ ಕರುಳಿನಲ್ಲಿ ಅಲ್ಸರ್ ಆಗುತ್ತೆ, ಹೊಟ್ಟೆನೋವು ಬರುತ್ತೆ, ಸ್ಕಿನ್ ಅಲರ್ಜಿಯಾಗುತ್ತದೆ, ನಾಲಿಗೆ ಮೇಲೆ ಬಿಳಿ ಮಚ್ಚೆ ಆಗುತ್ತದೆ. ಟೈಪಡ್ ಬಂದಾಗ ತುಂಬಾ ಜ್ವರ ಬರುತ್ತದೆ, ತಲೆನೋವು, ಕೆಮ್ಮು, ಸುತ್ತು, ಇನ್ನೂ ಹಲವು ಸಮಸ್ಯೆಗಳಿಂದ ನರಳುತ್ತಾರೆ. ಈ ಟೈಪಡ್ ಜ್ವರ ಬಂದಾಗ ಮೊದಲು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ನಂತರ ಕೆಲವು ಮನೆಮದ್ದನ್ನು ಬಳಸುವುದರಿಂದ ಈ ಕಾಯಿಲೆಯಿಂದ ಬೇಗ ಗುಣಮುಖರಾಗಬಹುದು.

 
2 ಲೀಟರ್ ನೀರಿಗೆ 4-5 ಲವಂಗ ಹಾಕಿ 10-15 ನಿಮಿಷ ಕುದಿಸಿ. ನಂತರ ತಣ್ಣಗಾಗಿಸಿ ಸೋಸಿ ದಿನಪೂರ್ತಿ ಬಾಯಾರಿಕೆಯಾದಾಗ ಕುಡಿಯಿರಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಟೈಪಡ್ ಬೇಗ ಕಡಿಮೆಯಾಗುತ್ತದೆ. ಹೀಗೆ 10 ದಿನ ಮಾಡಿ. ಅದರ ಜೊತೆಗೆ ತುಳಸಿ ರಸ 2 ಚಮಚ ತೆಗೆದುಕೊಂಡು ಅದಕ್ಕೆ 1 ಚಿಟಿಕೆ ಮಣಸಿನ ಪುಡಿಯನ್ನು ಮಿಕ್ಸ್ ಮಾಡಿ ಊಟ ಆದ ಮೇಲೆ 3 ಹೊತ್ತು ತೆಗೆದುಕೊಳ್ಳಿ. ಇದನ್ನು 15 ದಿನ ಮಾಡಿ. ಅದರ ಜೊತೆಗೆ 200ಎಂಎಲ್ ಮಜ್ಜಿಗೆ ತೆಗೆದುಕೊಂಡು ಅದಕ್ಕೆ 15 ಎಂಎಲ್ ಕೊತ್ತಂಬರಿ ಸೊಪ್ಪಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಊಟ ಆದ ಮೇಲೆ 2 ಹೊತ್ತು ಕುಡಿಯಿರಿ. ಇದನ್ನು 15 ದಿನ ಮಾಡಿ. ಈ ಮೂರು ಮನೆಮದ್ದನ್ನು ಬಳಸಿದರೆ ಬೇಗ ಟೈಪಡ್ ಜ್ವರ ಗುಣವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ