ಮಕ್ಕಳನ್ನು ಜಂತುಹುಳದಿಂದ ರಕ್ಷಿಸಲು ಈ ಮನೆಮದ್ದು ಬಳಸಿ

ಭಾನುವಾರ, 17 ಡಿಸೆಂಬರ್ 2017 (06:51 IST)
ಬೆಂಗಳೂರು: ಮಕ್ಕಳಲ್ಲಿ ಹೆಚ್ಚಾಗಿ ಜಂತುಹುಳದ  ತೊಂದರೆ ಇದ್ದೆ ಇರುತ್ತದೆ. ಇದರಿಂದ ಅವರಿಗೆ ಹೊಟ್ಟೆನೋವು ಬರುತ್ತದೆ, ಹೊಟ್ಟೆ ಹಸಿವಾಗದಿರುವುದು, ತುಂಬಾ ಸಣ್ಣ ಆಗುವುದು, ಹೊಟ್ಟೆ ಇನ್ ಫೆಕ್ಷನ್ ಆಗುವುದು ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಜಂತು ಹುಳಗಳಿಗೆ ಔಷಧಿ ತೆಗೆದುಕೊಂಡರು ಅವುಗಳು ಮತ್ತೆ ಸ್ವಲ್ಪ ದಿನಗಳಲ್ಲೇ ಹುಟ್ಟುತ್ತವೆ. ಮನೆಮದ್ದಿನಿಂದ ಈ ಹುಳಗಳನ್ನು ನಾಶಮಾಡಬಹುದು.


ಮೊದಲನೇಯದಾಗಿ ಮಕ್ಕಳಿಗೆ 2 ಚಮಚ ಬೆಲ್ಲವನ್ನು ತಿನ್ನಿಸಿ 15 ನಿಮಿಷ ಬಿಟ್ಟು 2 ಚಮಚ ಮೊಸರಿಗೆ, 2 ಚಮಚ ಜೇನುತುಪ್ಪ ಬೆರೆಸಿ ತಿನ್ನಿಸಬೇಕು. ಇದರಿಂದ ಹುಳ ಮಲದಲ್ಲಿ ಹೊರಬರುತ್ತದೆ. ಎರಡನೇಯದಾಗಿ 2 ಚಮಚ ಬೆಲ್ಲ ತಿನ್ನಿಸಿ 15 ನಿಮಿಷ ಬಿಟ್ಟು ½ ಚಮಚ ಓಂಕಾಳು ತಿನ್ನಿಸಿ ನೀರು ಕುಡಿಸಬೇಕು. ಮೂರನೇಯದಾಗಿ  ಪುದೀನ ಸೊಪ್ಪು 4-5 , ಕಾಳಮೆಣಸು 4-5 ನ್ನು 2 ಚಮಚ ನಿಂಬೆರಸದ ಜೊತೆಗೆ ಜಜ್ಜಿ ಅದರ ಪೇಸ್ಟನ್ನು ಮಕ್ಕಳಿಗೆ ತಿನ್ನಿಸಿ.


ನಾಲ್ಕನೇಯದಾಗಿ 1 ಚಮಚ ಕಹಿಬೇವು ಸೊಪ್ಪಿನ ರಸಕ್ಕೆ 1ಚಮಚ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಿಸಿದ ನಂತರ 1 ಗಂಟೆಯ ತನಕ ಏನು ತಿನ್ನಿಸದೆ ಆಮೇಲೆ 1ಚಮಚ ಹರಳೆಣ್ಣಿ ತಿನ್ನಿಸಬೇಕು.  ಹೀಗೇ ದಿನಕ್ಕೆ ಒಂದು ಬಾರಿ ಮಾಡಿದರೆ ಜಂತುಹುಳ 2-3 ದಿನಗಳಲ್ಲೇ ನಾಶವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ