ಬೆಂಗಳೂರು : ಹೆಚ್ಚಿನವರಿಗೆ ಸಂಜೆಯ ವೇಳೆ ಟೀ ಕುಡಿಯುವಾಗ ಬಿಸ್ಕೆಟ್ ತಿನ್ನುವ ಅಭ್ಯಾಸವಿರುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೇಯದು ಎಂಬ ಗೊಂದಲದಲ್ಲಿರುತ್ತಾರೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಟೀ ಮತ್ತು ಬಿಸ್ಕೇಟ್ ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ ಟೀ ಜೊತೆಗೆ ರಸ್ಕ್, ಮುಂತಾದವುಗಳನ್ನು ಸೇವಿಸಬಹುದು. ಇವುಗಳಲ್ಲಿರುವ ಹಿಟ್ಟಿನ ಅಂಶ ಟೀಯಲ್ಲಿರುವ ಆಮ್ಲೀಯತೆಯನ್ನು ಹೀರಿಕೊಳ್ಳುವುದರಿಂದ ಜೀವರಸಗಳು ಹೆಚ್ಚು ಪ್ರಭಾವಕ್ಕೆ ಒಳಗಾಗುವುದಿಲ್ಲ.
ಅಲ್ಲದೇ ಟೀ ಜೊತೆಗೆ ಸಿಹಿ ಮತ್ತು ಉಪ್ಪಿರುವ ತಿಂಡಿಗಳನ್ನು ತಿನ್ನುವುದರ ಮೂಲಕ ದೇಹಕ್ಕೆ ಅಗತ್ಯವಿರುವ ಸೋಡಿಯಂ ಅಂಶವನ್ನು ಪಡೆದುಕೊಂಡು ಹೊಟ್ಟೆ ಹಾಗೂ ಕರಳಿನ ಹುಣ್ಣಿನಿಂದ ಪಾರಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.