ನಿದ್ರಾ ಹೀನತೆ ಸಮಸ್ಯೆಯೇ: ಇಲ್ಲಿದೆ ಕೆಲ ಸುಲಭ ಟಿಪ್ಸ್‌ಗಳು

Sampriya

ಭಾನುವಾರ, 17 ಮಾರ್ಚ್ 2024 (13:38 IST)
ಬೆಂಗಳೂರು:  ಮನುಷ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರಬೇಕಾದರೆ ಸಾಕಷ್ಟು ಪ್ರಮಾಣದ ಉತ್ತಮ ಗುಣಮಟ್ಟದ ನಿದ್ರೆ ಮುಖ್ಯವಾಗುತ್ತದೆ. 
 
ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು, ಅನುಕೂಲಕರವಾದ ನಿದ್ರೆಯ ವಾತಾವರಣವನ್ನುಸೃಷ್ಟಿಸಲು, ನಿದ್ರೆಯ ಚಕ್ರವನ್ನು ಸುಧಾರಿಸಲು ಕೆಲವು ಸಲಹೆಗಳು ಇಲ್ಲಿವೆ.
 
ನಿದ್ರೆಯ ವೇಳಾಪಟ್ಟಿ ಮಾಡಿ: 
ವಾರಾಂತ್ಯ ಸೇರಿದಂತೆ ನಿಗದಿತ ಸಮಯದಲ್ಲಿ ಮಲಗಲು ಮತ್ತು ಏಳಲು ಸಮಯವನ್ನು ನಿಗದಿಪಡಿಸಿ. ದಿನನಿತ್ಯ ಒಂದೇ ಸಮಯದಲ್ಲಿ ಮಲಗುವುದರಿಂದ ಉತ್ತಮ ನಿದ್ರೆ ಹಾಗೂ ಸರಿಯಾಗಿ ಎಚ್ಚರಗೊಳ್ಳಲು ಸಹಕಾರಿಯಾಗುತ್ತದೆ. 
 
ಮಲಗುವ ವೇಳೆ  ಧ್ಯಾನ ಮಾಡಿ: 
ಮಲಗುವ ಮುನ್ನ, ಓದುವುದು, ಬೆಚ್ಚಗಿನ ಸ್ನಾನ ಮಾಡುವುದು ಅಥವಾ ಆಳವಾದ ಉಸಿರಾಟ ಅಥವಾ ಧ್ಯಾನದಂತಹ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿ. ಈ ರೀತಿ ಅಭ್ಯಾಸ ಮಾಡುವುದರಿಂದ ನಿದ್ರೆ ಮಾಡಲು ಅನುವು ಮಾಡಿಕೊಡುತ್ತದೆ.
 
ಕೆಫೀನ್ ಸೇವನೆ ನಿಲ್ಲಿಸಿ: 
 
ಮಲಗುವ ಮುನ್ನ ಕೆಫೀನ್ ಸೇವನೆಯನ್ನು ದೂರ ಮಾಡಿ. ಕೆಫೀನ್ ಸೇವನೆ ಮಾಡುವುದರಿಂದ ಇದು ನಿದ್ರೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
 
ಮಲಗುವ ವೇಳೆ ಮೊಬೈಲ್ ದೂರವಿಡಿ: 
ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು (ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಕಂಪ್ಯೂಟರ್‌ಗಳು ಮತ್ತು ಟೆಲಿವಿಷನ್‌ಗಳ) ವೀಕ್ಷಣೆ ದೂರಮಾಡಿ.  ನೀಲಿ ಬೆಳಕು ಮೆಲಟೋನಿನ್ ಉತ್ಪಾದನೆಗೆ ಅಡ್ಡಿಯಾಗಬಹುದು. ಕಡಿಮೆಯಾದ ಸ್ಕ್ರೀನ್ ಸಮಯವು ಉತ್ತಮ ನಿದ್ರೆಯ ಗುಣಮಟ್ಟವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
 
ದೈನಂದಿನ ದೈಹಿಕ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ
ನಿಯಮಿತ ವ್ಯಾಯಾಮವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿದ್ರೆ-ಎಚ್ಚರ ಚಕ್ರಗಳನ್ನು ನಿಯಂತ್ರಿಸುತ್ತದೆ.
 
ಹಗಲಿನಲ್ಲಿ ನಿದ್ರೆಯನ್ನು ಮಿತಿಗೊಳಿಸಿ: ನಿಮ್ಮ ಚಿಕ್ಕನಿದ್ರೆಯನ್ನು ಕಡಿಮೆ ಮಾಡಿ ಮತ್ತು ತಡವಾಗಿ ನಿದ್ದೆ ಮಾಡುವುದನ್ನು ತಪ್ಪಿಸಿ. ಅತಿಯಾದ ಹಗಲಿನ ನಿದ್ದೆಯು ರಾತ್ರಿಯ ನಿದ್ರೆಯ ನಮೂನೆಗಳನ್ನು ತೊಂದರೆಗೊಳಿಸುತ್ತದೆ. ಆದ್ದರಿಂದ ಹಗಲು ಹೊತ್ತಿನಲ್ಲಿ ಮಾಡುವ ನಿದ್ರೆಯ ಸಮಯವನ್ನು ಮಿತಿಗೊಳಿಸಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ