ಚಳಿಗಾಲದಲ್ಲಿ ಹೆಚ್ಚಾಗಿ ಹೂಕೋಸನ್ನು ಸೇವಿಸುವುದು ಉತ್ತಮ. ಯಾಕೆ ಗೊತ್ತಾ?
ಭಾನುವಾರ, 22 ನವೆಂಬರ್ 2020 (06:16 IST)
ಬೆಂಗಳೂರು : ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಬಹಳ ಬೇಗನೆ ಕಫ, ಶೀತ ಶುರುವಾಗುತ್ತದೆ. ಹಾಗಾಗಿ ಹೂಕೋಸನ್ನು ನಿಯಮಿತವಾಗಿ ಸೇವಿಸಿ. ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಹೂಕೂಸು ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸಿ. ಯಾಕೆಂದರೆ ಹೂಕೋಸು ಉಷ್ಣದಿಂದ ಕೂಡಿರುವ ತರಕಾರಿ. ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುವುದರ ಮೂಲಕ ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ. ಇದರಿಂದ ಚಳಿಗಾಲದ ತಂಪಾದ ವಾತಾವರಣದಿಂದ ಉಂಟಾಗುವ ಆರೋಗ್ಯ ಸಮಸ್ಯೆಯಿಂದ ಇದು ನಮ್ಮನ್ನು ಕಾಪಾಡುತ್ತದೆ ಎನ್ನಲಾಗಿದೆ.