ಒಡೆದ ತುಟಿಗಳ ಆರೈಕೆಗೆ ಬಳಸಿ ನಿಂಬೆ ಲಿಪ್ ಬಾಮ್. ಇದನ್ನ ಮಾಡುವುದು ಹೇಗೆ ಗೊತ್ತಾ?
ಮಂಗಳವಾರ, 20 ಆಗಸ್ಟ್ 2019 (08:47 IST)
ಬೆಂಗಳೂರು : ತುಟಿ ಒಡೆಯುವುದನ್ನು ತಡೆಯಲು ಕೆಮಿಕಲ್ ಯುಕ್ತ ಲಿಪ್ ಬಾಮ್ ಗಳನ್ನು ಬಳಸುತ್ತಾರೆ. ಇದರಿಂದ ಲಿಪ್ ಮತ್ತಷ್ಟು ಹಾನಿಯಾಗುತ್ತದೆ. ಅದರ ಬದಲು ಮನೆಯಲ್ಲಿಯೇ ನಿಂಬೆ ಲಿಪ್ ಬಾಮ್ ತಯಾರಿಸಿ ಬಳಸಿ.
1 ಗ್ಲಾಸ್ ಬೌಲ್ ನಲ್ಲಿ ವ್ಯಾಸಲಿನ್ ಹಾಕಿ ಅದನ್ನು ಮೈಕ್ರೋವೇವ್ ನಲ್ಲಿ ಮೂವತ್ತು ನಿಮಿಷದವರೆಗೆ ಇರಿಸಿ. ನಂತರ ಇದಕ್ಕೆ ನಿಂಬೆ ರಸ ಮತ್ತು ಜೇನು ತುಪ್ಪ ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಡಿ. ಹತ್ತು ನಿಮಿಷದ ನಂತರ ಇದನ್ನು ಫ್ರೀಜರ್‌ನಲ್ಲಿ ಇಡಿ. ಇದನ್ನು ನಿಮಗೆ ಅಗತ್ಯವೆನಿಸಿದಾಗ ಲಿಪ್ ಗೆ ಉಪಯೋಗಿಸಿ.