ಗರ್ಭಿಣಿಯರು ಈ ರೀತಿಯಾದ ಕೆಲಸಗಳನ್ನು ಮಾಡಿದರೆ ತುಂಬಾ ಅಪಾಯವಂತೆ!

ಶನಿವಾರ, 20 ಜನವರಿ 2018 (07:43 IST)
ಬೆಂಗಳೂರು : ಗರ್ಭಿಣಿಯರು ಈ ಸಮಯದಲ್ಲಿ ತಮ್ಮ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಇಲ್ಲವಾದಲ್ಲಿ ಅದರ  ಪರಿಣಾಮ ಮಗುವಿನ ಮೇಲಾಗುತ್ತದೆ. ಯಾವುದೇ ಕೆಲಸಗಳನ್ನು ಮಾಡುವಾಗ ವೈದ್ಯರ ಸಲಹೆಯನ್ನು ಪಡೆದು ಅವರ ಒಪ್ಪಿಗೆ ತೆಗೆದುಕೊಂಡೇ ಮಾಡಬೇಕು.

 
ಮೊದಲನೇಯದಾಗಿ  ಗರ್ಭಿಣಿಯರು ಡಾಕ್ಟರ್ ಸಲಹೆ ಇಲ್ಲದೆ ವ್ಯಾಯಾಮಗಳನ್ನು ಮಾಡಬಾರದು. ಹಾಗೆ ಅವರು ಕಾಫಿ, ಸೋಡಾ, ಗ್ರೀನ್ ಟೀ, ಬ್ಲ್ಯಾಕ್ ಟೀ, ತಂಪು ಪಾನೀಯಗಳಿಂದ ದೂರವಿರಬೇಕು. ಡಾಕ್ಟರ್ ಸಲಹೆ ಇಲ್ಲದೆ ಯಾವುದೇ ಮಾತ್ರೆ ಅಥವಾ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳಬಾರದು. ಧೂಮಪಾನ ಹಾಗು ಮಧ್ಯಪಾನಗಳನ್ನು ಮಾಡಲೇಬಾರದು. ಇದರಿಂದ ಮಗುವಿಗೆ ಮಾತ್ರವಲ್ಲ ತಾಯಿಯ ಆರೋಗ್ಯದ ಮೇಲೂ ತುಂಬಾ ಪ್ರಭಾವ ಬೀರುತ್ತದೆ.

 
ಹಾರರ್ ಸಿನಿಮಾ, ಒತ್ತಡದಾಯಕ ಸಿರಿಯಲ್ ಗಳನ್ನು ನೋಡಬಾರದು. ಹಾಗೆ ಪಪ್ಪಾಯ ಹಣ್ಣನ್ನು ತಿನ್ನಬಾರದು. ಇದನ್ನು ತಿಂದರೆ ಗರ್ಭಪಾತವಾಗುವ ಸಂಭವವಿರುತ್ತದೆ. ಎತ್ತರವಾದ ಹೀಲ್ಸ್ ಪಾದರಕ್ಷೆಗಳನ್ನು ಧರಿಸಬಾರದು. ಅತಿಯಾಗಿ ಮೊಬೈಲ್ ಉಪಯೋಗಿಸಬಾರದು. ಅತಿಯಾಗಿ ಖಾರವಾಗಿರುವ ಮಸಾಲಾ ಪದಾರ್ಥಗಳನ್ನು ಸೇವಿಸಬಾರದು. ಹಾಗೆ ಅತಿಯಾಗಿ ಬಿಸಿಯಾದ ಪದಾರ್ಥಗಳನ್ನು ಕೂಡ ಸೇವಿಸಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ